Suma Srf profile
Suma Srf
7 4 0
Posts Followers Following
Suma Srf
Quote by Suma Srf - ದೇವತೆ

ಮಸುಕಿನ ಮಂಜಿನಲಿ 
ಬೆಳ್ಳಂಬೆಳಗ್ಗೆ ಎದ್ದು
ಕಸ-ಮುಸರೆ ತೊಳೆದು
ಅಡುಗೆ ಮಾಡುವಳು ನನ್ನಮ್ಮ 
ಅಡುಗೆ ಮಾಡಿ ತಿನ್ನಿಸುವಳು ನನ್ನಮ್ಮ....

ಕಟ್ಟಿಗೆಗೆ ಓಡಾಡಿ-ಓಡಾಡಿ ಕಾಲುಗಳು ಸವೆತಿಹುದು
ಒಲೆಯನ್ನು ಊದಿ-ಊದಿ ಉಸಿರು ಕಟ್ಟಿಹುದು 
ಬೆಂಕಿಯ ಶಾಖದಿ ಕೈಗಳು ಸುಟ್ಟಿಹುದು
ಆದರೂ ಮಾಸಲಿಲ್ಲ ಆಕೆಯ ಪ್ರೀತಿ
ನಗುಮುಖದಿಂದಿರುವಳು ನನ್ನಮ್ಮ....

ಹೊಲಗದ್ದೆಯಲ್ಲಿ ದುಡಿದು-ದುಡಿದು ಸಾಕಿದವಳು
ಬಿಸಿಲಿನಲ್ಲಿ ಬೆಂದಿದವಳು
ಕಷ್ಟವ ನುಂಗಿ-ನುಂಗಿ ಬಡಕಲು ದೇಹದವಳು
ನಾ ಕಂಡ ಕಷ್ಟ ನಿಮಗೆ ಬೇಡವೆಂದು ಹೇಳಿದವಳು
ಮಕ್ಕಳಿಗಾಗಿ ಶಿಕ್ಷಣ ಕೊಡಿಸಿದವಳು
ಅನಕ್ಷರಸ್ಥೆಯಾಗಿದ್ದರೂ ನಮ್ಮನ್ನು ಅಕ್ಷರಸ್ಥೆ ಮಾಡಿದವಳು ನನ್ನಮ್ಮ....

ಇವಳ ತ್ಯಾಗಕ್ಕೆ
ಇವಳ ಪ್ರೀತಿಗೆ
ಇವಳ ಸ್ವಾಭಿಮಾನಕ್ಕೆ
ಇವಳ ಮಾತೃ ವಾತ್ಸಲ್ಯಕ್ಕೆ
ಇವಳ ಧೈರ್ಯಕ್ಕೆ
ನನ್ನ ಮನದಲೊಂದು ಗುಡಿಯ ಕಟ್ಟಿರುವೆ
ಆ ಗುಡಿಯ ದೇವತೆಯೇ ನನ್ನಮ್ಮ....


            ಸುಮ. ಎಂ  - Made using Quotes Creator App, Post Maker App
4 likes 0 comments
Suma Srf
Quote by Suma Srf - ನನ್ನಿಂದ ದೂರ ಹೋಗೋವ್ರಿಗೆ ದಾರಿ ಬಿಡ್ತೀನಿ...
ನಾನೇ ಬೇಕು ಅಂದೋವ್ರನ್ನ ಜೋಪಾನ ಮಾಡ್ತೀನಿ...

ದಾರೀನಾ? ಅಥವಾ ಜೋಪಾನನಾ? ಆಯ್ಕೆ ಮಾತ್ರ ನಿಮಗೆ ಕೊಡ್ತೀನಿ...

ಸುಮ.ಎಂ  - Made using Quotes Creator App, Post Maker App
0 likes 0 comments
Suma Srf
Quote by Suma Srf - 

ಮೃಷ್ಟಾನ್ನ ಭೋಜನವಾದರೇನು?
ಗಂಜಿಯಾದರೇನು?
ಹಸಿವನ್ನು  ನೀಗಿಸಿದರೆ  ಸಾಕು  ಈ  ದೇಹಕೆ....

ಅರಮನೆಯಾದರೇನು? 
ಗುಡಿಸಲಾದರೇನು?
ನೆಮ್ಮದಿ  ಒಂದ್ದಿದ್ದರೆ  ಸಾಕು  ಈ  ಮನಕೆ....
                 
                                     ಸುಮ. ಎಂ  - Made using Quotes Creator App, Post Maker App
1 likes 0 comments
Suma Srf
Quote by Suma Srf - 

ಮೃಷ್ಟಾನ್ನ ಭೋಜನವಾದರೇನು?
ಗಂಜಿಯಾದರೇನು?
ಹಸಿವನ್ನು  ನೀಗಿಸಿದರೆ  ಸಾಕು  ಈ  ದೇಹಕೆ....

ಅರಮನೆಯಾದರೇನು? 
ಗುಡಿಸಲಾದರೇನು?
ನೆಮ್ಮದಿ  ಒಂದ್ದಿದ್ದರೆ  ಸಾಕು  ಈ  ಮನಕೆ....
                 
                                     ಸುಮ. ಎಂ  - Made using Quotes Creator App, Post Maker App
1 likes 0 comments
Suma Srf
Quote by Suma Srf - "ನೊಂದ ಮನಸ್ಸು"

ಮನಸ್ಸಿನ ಭಾರಕೆ....
ಕಣ್ಣೀರಿನ ಜಾರಿಕೆ....
ಸೇರಬೇಕೆಂದಿದೆ ಈ ಕಾಯ ಮಣ್ಣಿಗೆ.....

                             ಸುಮ. ಎಂ  - Made using Quotes Creator App, Post Maker App
1 likes 0 comments
Suma Srf
Quote by Suma Srf - "ಮರೆತ ನೆನಪಿನ ಅಲೆ"

ಹೇ ನೆನಪೇ ನೀ ಬಾರದಿರು
ನನ್ನೀ ಹೃದಯದ ಅಂಗಳಕೆ....

ಹೇ ನೆನಪೇ ನೀ ಇಣುಕಿ ನೋಡದಿರು
ನನ್ನೀ ಮನಸಿನ ಆಳಕೆ....

ನೆನಪಿಲ್ಲದಿದ್ದರೂ ನೆನಪಾಗುವ
ನನ್ನೀ ಭಾವಕೆ....

ನೆನಪಾದ ನೆನಪಿನ ನೆನಪುಗಳೇ
ನನ್ನೀ ಅಂಜಿಕೆ....

ಹೇ ನೆನಪೇ ಹಿಂದುರುಗಿ ನೋಡದಿರು ನಾ ಸಿಗಲಾರೆ
ನಿನ್ನೀ ನೆನಪುಗಳ ನೆನಪಿನ ತೀರಕೆ....

ಮರೆತ ನೆನಪುಗಳ ನೆನೆದು ಬರೆದೆ
ನನ್ನೀ ನೆನಪಿನ ಚಿಕ್ಕ ಖಂಡಿಕೆ...

                     ಸುಮ. ಎಂ  - Made using Quotes Creator App, Post Maker App
1 likes 0 comments
Suma Srf Suma Srf
Quote by Suma Srf Suma Srf - ಪ್ರೀತಿಯ ಅಪ್ಪನೇ..........

ದುಃಖದಲ್ಲಿದ್ದಾಗ ನಿನ್ನ ಹೆಗಲು ಬೇಕು
ಅತ್ತಾಗ ಕಣ್ಣೀರು ಒರೆಸಲು ನಿನ್ನ ಕೈಗಳು ಬೇಕು
ಸಂತೋಷದಿಂದ ಅಪ್ಪಿಕೊಳ್ಳಲು ನೀ ಬೇಕು
ಕೋಪ ತೋರಿಸಿಕೊಳ್ಳಲೂ ನೀನೇ ಬೇಕು
ತಪ್ಪು ಮಾಡಿದಾಗ ನಿನ್ನ ಹೊಡೆತ ಬೈಗುಳ ಬೇಕು
ಮುನಿಸಿಕೊಂಡಾಗ ನೀ ಮಾಡುವ ಮುದ್ದು ಬೇಕು
ಪ್ರೀತಿಯಿಂದ ಕರೆಯುವ ಮಗಳೇ ಮಗಳೇ ಎಂಬ ಸವಿಮಾತು ಬೇಕು
ಭಾವನೆಗಳಿಗೆ ಸ್ಪಂದಿಸುವ ನಿನ್ನ ಮನಸ್ಸು ಬೇಕು

ನೀ ಇಲ್ಲದೆ ನಾನಿಲ್ಲ
ನೀ ನನ್ನ ಜೀವ
ನೀ ಕಣ್ಣಿಗೆ ಕಾಣುವ ನನ್ನ ದೇವರು
ಈ ದೇವರು ಸದಾ ನನ್ನೊಂದಿಗೆ ಇರಬೇಕು
ಈ ದೇವರು ಸದಾ ನಗುತಿರಬೇಕು
                       ಸದಾ ನಗುತಿರಬೇಕು............

ಅಪ್ಪಂದಿರ ದಿನದ ಶುಭಾಶಯಗಳು ಅಪ್ಪಾ.......❤️❤️

      ಸುಮ. ಎಂ  - Made using Quotes Creator App, Post Maker App
4 likes 0 comments