Ravichandra Ravichandra profile
Ravichandra Ravichandra
19 0 4
Posts Followers Following
bangalore
Ravichandra Ravichandra
Quote by Ravichandra Ravichandra - ಹೇ 
ನನ್ನ ಆತ್ಮೀಯ ಗೆಳತಿ 
ನೀ ಕಾಣು ಗೆಲುವಿನ ಪ್ರಗತಿ 
ಅಗಸದಲ್ಲಿರುವ ಬಾನು 
ಚುಕ್ಕಿ ತಾರೆಗಳಿಲ್ಲದಿರೆ ಚಂದವೇನು 
ನಸು ನಗುತಲಿದ್ದರೆ ನೀನು 
ಬದುಕು ಎಂದು ಹಾಲು ಜೇನು 
ಸದಾ ಸಂತಸ ಸಂಭ್ರಮ ತುಂಬಿರಲಿ 
ಈ ನಿನ್ನ ಬಾಳಲಿ 
ನವ ಸೂರ್ಯೋದಯದ ಬೆಳಕು 
ಮೂಡಲಿ ಈ ನಿನ್ನ ಬದುಕಲಿ 





V. Ravi chandra - Made using Quotes Creator App, Post Maker App
1 likes 0 comments
Ravichandra Ravichandra
Quote by Ravichandra Ravichandra - ತನು ಕನ್ನಡ 
ಮನ ಕನ್ನಡ 
ನಡೆ ಕನ್ನಡ 
ನುಡಿ ಕನ್ನಡ 
ಉಸಿರು ಉಸಿರಲು 
ಕನ್ನಡ 
ನರ ನಾಡಿಗಳಲು 
ಕನ್ನಡ 
ನನ್ನ ದೇಹದಲಿ 
ಹರಿದಾಡುತಿರುವ 
ರಕ್ತದ 
ಕಣ ಕಣಗಳಲು 
ಕನ್ನಡ ಕನ್ನಡ ಕನ್ನಡ 

V. Ravi chandra - Made using Quotes Creator App, Post Maker App
3 likes 0 comments
Ravichandra Ravichandra
Quote by Ravichandra Ravichandra - ಯಾವ ಸಂಬಂಧಗಳೆ ಆದರೂ 
ನಂಬಿಕೆಯೆ ಬುನಾದಿ 
ಆ ನಂಬಿಕೆಯೆ ಇಲ್ಲವಾದರೆ 
ಅಂತಹ ಸಂಬಂಧಗಳೆಲ್ಲ ಸಮಾಧಿ 

V. Ravi chandra - Made using Quotes Creator App, Post Maker App
5 likes 0 comments
Ravichandra Ravichandra
Quote by Ravichandra Ravichandra - ತಾಯಿ ಮಗುವಿನದು 
ಕರುಳ ಬಳ್ಳಿಯ ಸಂಬಂಧ 
ಸೋದರ ಸೋದರಿಯರ 
ಅಕ್ಕರೆಯ ಸಂಬಂಧ 
ಪತಿ ಪತ್ನಿಯರ 
ಬಿಡಿಸಲಾರದ ಸಂಬಂಧ
ಗೆಳೆಯ ಗೆಳತಿಯರ 
ಸ್ನೇಹದ ಸಂಬಂಧ 
ಗುರು ಹಿರಿಯರ 
ಹಾರೈಕೆಯ ಸಂಬಂಧ 
ಈ ಮನುಜನಿಗಿದೆ ಜಗದೊಳಗೆ
ನೂರಾರು ಸಂಬಂಧ 
ಎಲ್ಲಕ್ಕೂ ಮಿಗಿಲಾಗಿ 
ಎಲ್ಲರೊಳಗಿರಬೇಕು 
ಮಾನವೀಯತೆಯ ಸಂಬಂಧ 





V. Ravi chandra - Made using Quotes Creator App, Post Maker App
1 likes 0 comments
Ravichandra Ravichandra
Quote by Ravichandra Ravichandra - ಹೇ 
ಗಗನವೆ
ಒಲವಿನ ಸುಧೆಯನು 
ಹರಿಸುವೆ ನೀ 
ವರ್ಷ ಧಾರೆಯಲಿ 
ಇರ್ಷ್ಶ್ಯೆಯಿರದ ಮತ್ಸರವಿರದೆ 
ಹರುಷದ ಹೊನಲಾಗಿ 
ಪ್ರವಹಿಸುವೆ ನೀ 
ಈ  ಜೀವ ಜಗತ್ತಿನಲಿ 

V. Ravi chandra - Made using Quotes Creator App, Post Maker App
0 likes 0 comments
Ravichandra Ravichandra
Quote by Ravichandra Ravichandra - ಅರಳುವ ಹೂವಿನ ಮೇಲೆ 
ಒಲವಿನ ಸ್ಪರ್ಶದ ಲೀಲೆ 
ನಲಿಯುವ ಬೃಂಗದ ಬಾಲೆ 
ಹೊತ್ತು ತಂದಿದೆ 
ಸ್ನೇಹದ ಕರೆಯೋಲೆ 

Ravi chandra - Made using Quotes Creator App, Post Maker App
1 likes 0 comments
Ravichandra Ravichandra
Quote by Ravichandra Ravichandra - ಹೇ 
ಗೆಳತಿ ನಿನ್ನ ಸ್ನೇಹದ ವಿನಂತಿಯನು 
ಸ್ವೀಕರಿಸಿ ಪ್ರೀತಿಯ ಅಹವಾಲು ಮಂಡಿಸಲೆ 
ನಿನ್ನ  ಉಭಯ ಕುಶಲೋಪರಿ ವಿಚಾರಿಸಿ 
ಒಲವಿನ ಪ್ರೇಮ ಪತ್ರವನು ಬರೆಯಲೆ 
ನಿನ್ನ ನಗುವಿನ ಸಾಂಗತ್ಯವನು ಬಯಸಲು 
ಮದುವೆ ಆಮಂತ್ರಣ ನೀಡಲೆ 

RAVI CHANDRA - Made using Quotes Creator App, Post Maker App
0 likes 0 comments
Ravichandra Ravichandra
Quote by Ravichandra Ravichandra - ನೀ
ತೊಟ್ಟಿರುವೆ
ಘಲ್
ಎನ್ನುವ
ಬೆಳ್ಳಿಯ
ಕಾಲ್ಗೆಜ್ಜೆ
ತಪ್ಪಿದೆ
ತಾಳವು
ಈ
ಹೃದಯದ
ಪ್ರತಿ
ಹೆಜ್ಜೆ 

V. Ravi chandra - Made using Quotes Creator App, Post Maker App
0 likes 0 comments
Ravichandra Ravichandra
Quote by Ravichandra Ravichandra - ಒಳ್ಳೆಯ ಸ್ನೇಹ ಸಾವಿರ
ಬಂಧುಗಳಿಗಿಂತ
ಶ್ರೇಷ್ಠವಾದುದು 

v. Ravi chandra - Made using Quotes Creator App, Post Maker App
0 likes 0 comments
Ravichandra Ravichandra
Quote by Ravichandra Ravichandra - ಅಪ್ಪಿಕೊ ತಂಗಾಳಿಯೆ,
ಬಿಸಿಲ ಬೇಗೆಯಿಂದ 
 ಮನವು ಹಗುರಾಗಲು
ದಣಿದ ಜೀವಗಳಿಗೆ 
 ನವ ಚೈತನ್ಯವಾಗಲು.

v. Ravi chandra  - Made using Quotes Creator App, Post Maker App
1 likes 0 comments

Explore more quotes

Ravichandra Ravichandra
Quote by Ravichandra Ravichandra - ನಟ್ಟ ನಡುರಾತ್ರಿಯಲಿ ನಿನದೆ ಕನವರಿಕೆ
 ನೀಡಬಾರದೇಕೆ ನನಗೆ ಸ್ವಲ್ಪ ಅರವಳಿಕೆ
ತಾಳಲಾರೆನು ಮನದ ಈ ಚಡಪಡಿಕೆ
 ತುಸು ತಣಿಸಬಾರದೇ ನನ್ನೊಡಲ ಬಾಯಾರಿಕೆ.!

V. Ravi chandra - Made using Quotes Creator App, Post Maker App
1 likes 0 comments
Ravichandra Ravichandra
Quote by Ravichandra Ravichandra - ಕಾವ್ಯವೊಂದು ಸ್ಫೂರ್ತಿಯ ಸೆಲೆ ನವ್ಯಸಾಹಿತ್ಯಕೆ ಕಲ್ಪನೆಯ ಕಲೆ
ಅಕ್ಷರಗಳ ಜಾತ್ರೆಯಲಿ ನಾ ಬರೆದ ಓಲೆ
ಸುಂದರವಾದ ಸರಮಾಲೆಯಾಗಿಸಿ
ಅರ್ಪಿಸುವ ಮಾಲೆ 🌹

v. Ravi chandra - Made using Quotes Creator App, Post Maker App
1 likes 0 comments
Ravichandra Ravichandra
Quote by Ravichandra Ravichandra - ಆ ನಿನ್ನ ಸಾಮಿಪ್ಯ, ಸಾನ್ನಿದ್ಯದಲ್ಲೆ
ನಾ ಖುಷಿಯ ಕಾಣುವೆ.
ಒಲವಿರದ ಈ ಬಾಳಲ್ಲಿ
ವರವಾಗಿ ನೀ ಬಾ.... ಗೆಳತಿ 

v. Ravichandra - Made using Quotes Creator App, Post Maker App
2 likes 0 comments
Ravichandra Ravichandra
Quote by Ravichandra Ravichandra - ಜೀವನವೊಂದು ಲೆಕ್ಕಾಚಾರ
ಯಾರಿಗೂ ತಿಳಿದಿಲ್ಲ ಇದರ ಸಾರ
ಬದುಕಿನ ಆಗು ಹೋಗುಗಳು
ಎಲ್ಲರು ಅರಿತಿದ್ದಿದ್ದರೆ..ಆ ದೇವರಿಗೂ
ಕೂಡ ಇರುತ್ತಿರಲಿಲ್ಲ
ಭಕ್ತಗಣ .... ಅಪಾರ 


v. Ravichandra - Made using Quotes Creator App, Post Maker App
4 likes 0 comments
Ravichandra Ravichandra
Quote by Ravichandra Ravichandra - ಆ ನಿನ್ನ ನೆನಪುಗಳೆ ಹಾಗೆ
ನನ್ನ ಮನದ ಹಕ್ಕಿಯೊಂದು
ಗರಿ ಬಿಚ್ಚಿ ಸ್ವಚಂದವಾಗಿ
ಹಾರಾಡಿದ ಹಾಗೆ !

v. Ravichandra  - Made using Quotes Creator App, Post Maker App
2 likes 0 comments
Ravichandra Ravichandra
Quote by Ravichandra Ravichandra - ಮುಂಜಾನೆಯ ಹೊಂಬೆಳಕಲಿ ಮೂಡಿದೆ ಹೊನ್ನ ರಶ್ಮಿಯ ಕಿರಣ ನಿಸರ್ಗದ ಮಡಿಲಲಿ ಹೊಸ ಬೆಳಕಿನ ವಾತಾವರಣ 
ಭೂತಾಯಿಯ ನೆಲವೆಲ್ಲ ಸಿಂಗರಿಸಿದ ಆಭರಣ
ಸೃಷ್ಟಿಯ ಈ ಚಲನೆಗೆ ಶಿರಬಾಗಿ ನಾ ಶರಣ 


v.Ravi chandra - Made using Quotes Creator App, Post Maker App
5 likes 2 comments
Ravichandra Ravichandra
Quote by Ravichandra Ravichandra - ನೆಮ್ಮದಿಯನ್ನು ಕಳೆದುಕೊಂಡು
ಕೋಟಿ ಸಂಪಾದನೆ ಮಾಡಿದರೇನು?
ಇರುವುದರನ್ನೆ ಅರ್ಥೈಸಿಕೊಂಡು
ಸಂತಸವ ಕಾಣು ನೀನು.

v Ravichandra - Made using Quotes Creator App, Post Maker App
3 likes 0 comments
Ravichandra Ravichandra
Quote by Ravichandra Ravichandra - ಜೀವನವೊಂದು ಧೀರ್ಘ ಕಾಲದ ಪಯಣ
ಭರವಸೆಯೆ ನಮಗೆ ಬೆಳ್ಳಿಯ ಆಶಾಕಿರಣ
ವದನಾರವಿಂದದ ಮೇಲಿನ ನಗುವೆ ಸುಂದರ ಆಭರಣ
ಗುರು ಹಿರಿಯರ ಮಾತುಗಳನು ವಿನಮ್ರತೆಯಲಿ ಆಲಿಸೋಣ 
ನಮ್ಮನರಿತವರಿಗೆ ಕೈಲಾದಷ್ಟು ಸಹಾಯ ಹಸ್ತವ ಚಾಚೋಣ
ಕಷ್ಟ ಸುಖಗಳೆರೆಡನು ಅರಿತು ಸರಿ
 ದಾರಿಯಲಿ ಸಾಗೋಣ 

v Ravi chandra - Made using Quotes Creator App, Post Maker App
3 likes 0 comments
Ravichandra Ravichandra
Quote by Ravichandra Ravichandra - ಸಂಜೆಯಲಿ ಸುರಿದ ಇಬ್ಬನಿಗೆ
ಚಂದದಿ ಅರಳಿದೆ ಸೂಜಿ ಮಲ್ಲಿಗೆ
ಅನುರಾಗದ ಅನುಬಂಧದ ಈ ಘಳಿಗೆ
ಪ್ರಕೃತಿಯಲಿ ಮೂಡಿದ ಹೊಸ ಬೆಸುಗೆ 

 Ravichandra v - Made using Quotes Creator App, Post Maker App
2 likes 0 comments