Poornima Prashanth profile
Poornima Prashanth
166 14 0
Posts Followers Following
Poornima Prashanth
Quote by Poornima Prashanth - ಪ್ರೀತಿಯ ತಂಪಿಗೆ
ಸೋಲಬಹುದು ಮನವು
ದರ್ಪದ ದಬ್ಬಾಳಿಕೆಗಲ್ಲಾ

ಕಾಳಜಿಯ ಕಂಪಿಗೆ 
ಕರಗಬಹುದು ಒಲವು
ಅಹಂಕಾರದ ಅಬ್ಬರಕ್ಕಲ್ಲ

ಲಾಲನೆಯ ಸೊಗಡಿಗೆ 
ಮಗುವಾಗಬಹುದು ಮನವು
ಸ್ವಾರ್ಥದ ಸೋಂಕಿನ ನಗು-ನುಡಿಗಳಿಗಲ್ಲ

ಪೂರ್ಣಿಮ ಪ್ರಶಾಂತ್ - Made using Quotes Creator App, Post Maker App
4 likes 0 comments
Poornima Prashanth
Quote by Poornima Prashanth - ಸಾಗಬೇಕು ಸಮಯದ ಜೊತೆಜೊತೆಗೆ
ಸಾಧ್ಯವಾದರೆ ಹೊಂದಿಕೊಳ್ಳುತ್ತಾ,,
ಇಲ್ಲವಾದರೆ ಮುಗುಳ್ನಕ್ಕು ಮುನ್ನಡೆಯುತ್ತಾ,,
ಮತ್ತೂ ಭಾರವೆನಿಸಿದರೆ
ನಿರ್ಲಕ್ಷ್ಯ ತೋರುತ್ತಾ..!!!

#ಪೂರ್ಣಿಮ ಪ್ರಶಾಂತ್# - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ಅಳಿಸಲು ಬಯಸುವುದಿಲ್ಲ 
ನಿನ್ನ ನೆನಪುಗಳ ಮೆರವಣಿಗೆ ...
ಆ ನೆನಪುಗಳೇ ಆಸರೆ 
ನನ್ನ ಬದುಕಿನ ಕೊನೆವರೆಗೆ..!
😍
Hum nahi mitana chathe hai 
theri yadon ko,,,
Yahee tho sahaara hai 
meri jeevan ko...!

🥰Poornima Prashanth 🥰  - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ಏನಾದರೂ ಕಲಿಯಲು
ಆಸೆ ಇದ್ದರಷ್ಟೇ ಸಾಲದು,;
ಮನದ ತುಂಬಾ 
ಉತ್ಸಾಹದ ಕಿಚ್ಚಿರಬೇಕು,,
ಸಾಧನೆಯ ಕೆಚ್ಚಿರಬೇಕು,,
ಹಂಬಲದ ಹುಚ್ಚಿರಬೇಕು..!!!

@ಪೂರ್ಣಿಮ ಪ್ರಶಾಂತ್@ - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ಪದ ಪದಗಳಿಗೂ ಸಂಭ್ರಮ
ಪ್ರತಿ ಅಕ್ಷರದ್ದೂ ಅದ್ದೂರಿ ಮೆರವಣಿಗೆ
ನಿನ್ನ ಸವಿನೆನಪಿನಲಿ 
ನಾ ಬರೆಯಹೊರಟಾಗ....
😍PP😍 - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ಮಾತುಗಳಿಂದ ಮನವನ್ನಳೆಯಲಾಗದು. 
ಅವು ಹೇಳೋದು 
ಮನಸ್ಸು ಏನನ್ನು ಹೊರಹಾಕಲು/ಹಂಚಿಕೊಳ್ಳಲು
 ಬಯಸುವುದೋ ಅಷ್ಟನ್ನು ಮಾತ್ರ..!

#ಪೂರ್ಣಿಮ ಪ್ರಶಾಂತ್#
 - Made using Quotes Creator App, Post Maker App
1 likes 0 comments
Poornima Prashanth
Quote by Poornima Prashanth - ಒಬ್ಬರೊಡನೆ ನಕ್ಕುಬಿಡುವಷ್ಟು,, 
ನಗುವನ್ನು ಹಂಚುವಷ್ಟು ಸರಾಗವಲ್ಲ,,
ಮತ್ತೊಬ್ಬರ ಮುಂದೆ ಕಣ್ತುಂಬಿಕೊಂಡು  ನೀರಾಗೋದು,,, 
ಅಥವಾ ಮತ್ತೊಬ್ಬರ ಕಣ್ಣೀರಿಗೆ ಸಾಂತ್ವನದ ಹೆಗಲಾಗೋದು...!!!

ಪೂರ್ಣಿಮ ಪ್ರಶಾಂತ್ - Made using Quotes Creator App, Post Maker App
1 likes 0 comments
Poornima Prashanth
Quote by Poornima Prashanth - ನೀ ನುಡಿಯದೇ ಕಲೆಹಾಕಿದ 
ಪ್ರೀತಿಯ ಮಾತುಗಳ ಮೋಡವಿಂದು ಒಡೆದು ಹೋಗಲಿ

ಹಾಡಿ ಕುಣಿದು ನಲಿದು ಸಂಭ್ರಮಿಸಬೇಕಿದೆ 
ನೆನೆ ನೆನೆದು ನಾನು ಘಮಘಮಿಸುವ ಪ್ರೇಮಸಿಂಚನದಲಿ

#ಪೂರ್ಣಿಮ ಪ್ರಶಾಂತ್# - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ಕತ್ತಲು ಹರಿದು ಬೆಳಕು ಮೂಡಲೇಬೇಕು,,,
 ನಿರೀಕ್ಷಿಸು...!     
ಕಷ್ಟವು ಕಳೆದು ಸಂತಸ ಮೂಡಲೇಬೇಕು,,,
 ತಾಳ್ಮೆವಹಿಸು...!
ಜೀವನ ಆ ದೇವನ ಅಮೂಲ್ಯ ಉಡುಗೊರೆ,,,,
 ಪ್ರೀತಿಸು...!

#ಪೂರ್ಣಿಮ ಪ್ರಶಾಂತ್# - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ಸೃಷ್ಟಿಯ ಅದ್ಭುತ ಶಕ್ತಿಯನ್ನು ಹೊಂದಿರುವ ಜೀವಾತ್ಮ ಅವಳು. ಎಲ್ಲಾ ಜೀವಪರ ಧ್ವನಿಗೆ ದನಿಯಾಗಿ ನಿಲ್ಲಬಲ್ಲವಳು. 
ಅವಳೇ #ಹೆಣ್ಣು# ಅವಳೇ #ಮಾತೆ#
ತಾಯಿ, ಸಹೋದರಿ, ಮಡದಿ, ಮಗಳು, ಹೀಗೆ ಹಲವು ರೂಪಗಳಲ್ಲಿ,, ತನ್ನನ್ನೇ ಮರೆತು, ಬದುಕಿನುದ್ದಕ್ಕೂ ತನ್ನವರಿಗಾಗಿಯೇ ಮಿಡಿವ, ಎಲ್ಲಾ ಹೆಣ್ಣು ಜೀವಗಳಿಗೆ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು
💐💐💐 - Made using Quotes Creator App, Post Maker App
0 likes 0 comments

Explore more quotes

Poornima Prashanth
Quote by Poornima Prashanth - ಕೊಂಚ ವಿರಾಮ ನೀಡು ಮಾತಿಗೆ ಗೆಳೆಯ
ಮನದಲ್ಲೇ ಮಾತಾಡುವ ಮುದ್ದಾಗಿ,, 
ತುಸು ಸಮಯ..!!

ಕಂಗಳ ಮುಚ್ಚಿ ನೀನೊಮ್ಮೆ ನೆನೆದು ನೋಡು
ಮನದಿ ಕಾಣುವ ನಮ್ಮ ಪ್ರೇಮದ,, 
ಯುಗಳ ಗೀತೆಯ..!! 

ದೂರದಿಂದಲೇ ಪ್ರೀತಿಸು ಮನಕೆ ಸನಿಹವಾಗಿ
ಆಗಾಗ ಅನುಭವಿಸುವುದೇ ಚೆಂದ,, 
ವಿರಹದ ಮಧುರತೆಯ..!!!

#ಪೂರ್ಣಿಮ ಪ್ರಶಾಂತ್# - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ಭವ್ಯ ಬಂಗಲೆಯಲ್ಲಿರುವ 
ಒಡೆದ ಮನಸುಗಳಿಗಿಂತ, 
ಪುಟ್ಟ ಜೋಪಡಿಯಲ್ಲಿರುವ 
ಬೆರೆತ ಹೃದಯಗಳದ್ದೇ 
ನಿಜವಾದ ಶ್ರೀಮಂತ ಬದುಕು.....

  ◆ ಪೂರ್ಣಿಮ ಪ್ರಶಾಂತ್ ◆ - Made using Quotes Creator App, Post Maker App
4 likes 0 comments
Poornima Prashanth
Quote by Poornima Prashanth - ಮತ್ತೆಂದೂ ಆಣೆ ಭಾಷೆ ಪ್ರಮಾಣಗಳನ್ನು 
ಮಾಡದಿರು ಗೆಳೆಯ,,,
ಈಗಾಗಲೇ ನೀ ಪೂರೈಸದೆ ಉಳಿಸಿಹ ಭಾಷೆಗಳನ್ನು ಪಟ್ಟಿಮಾಡುವುದಕ್ಕೇ ಸಾಲುತ್ತಿಲ್ಲ ಸಮಯ....
😞😑

#ಪೂರ್ಣಿಮ ಪ್ರಶಾಂತ್# - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ಕಾಡಬೇಕೆನಿಸಿದೆ ನಾ ನಿನ್ನ
 ನೆನಪುಗಳ ಹಂದರವಾಗಿ,,
ಸಾಧ್ಯವಾದರೊಮ್ಮೆ ಮರೆತುಬಿಡು 
ನೀನೆನ್ನ,,,ನನ್ನೊಲವೇ....
🌹

#PP  - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ಲೋಕದ ಹಂಗು ನನಗೇಕೆ
ನನ್ನ ಲೋಕವೇ ನೀನಾಗಿರುವಾಗ

ಭಯದ ಹಂಗು ನನಗೇಕೆ
ನನ್ನ ರಕ್ಷಣೆಗೆ ನೀ ನಿಂತಿರುವಾಗ

ದ್ವೇಷದ ಹಂಗು ನನಗೇಕೆ
ಪ್ರೀತಿಯ ಅಮೃತಧಾರೆ ಜೊತೆಯಿರುವಾಗ

ದುಃಖದುಮ್ಮಾನದ ಹಂಗು ನನಗೇಕೆ
ಸಂತೋಷದ ಚಿಲುಮೆಯಾಗಿ ನೀನಿರುವಾಗ

  #ಪೂರ್ಣಿಮಪ್ರಶಾಂತ್# - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ಕೊಂದ ನಂಬಿಕೆಯ ಶವ ಹೊತ್ತು ನಗಬೇಕಿದೆ,,, 
ನೋವಿನ ಅರಿವೇ ಇಲ್ಲವೇನೋ ಎಂಬಂತೆ.....

#PP  - Made using Quotes Creator App, Post Maker App
1 likes 1 comments
Poornima Prashanth
Quote by Poornima Prashanth -  
 ಕುದಿವ ಕೋಪವನ್ನೂ 
ಕ್ಷಣದಿ ಮರೆಸಿಬಿಡುವುದಲ್ಲೋ 
ಈ ನಿನ್ನ ಸವಿ ಪ್ರೇಮ,,,,
ಹತಾಶೆಯನು ದಹಿಸುವ 
ಅಮೃತಧಾರೆಯದು 
ನಿನ್ನ ಅನುರಾಗದ ಸಂಭ್ರಮ....
😍🌹😍

#ಪೂರ್ಣಿಮ ಪ್ರಶಾಂತ್# - Made using Quotes Creator App, Post Maker App
1 likes 0 comments
Poornima Prashanth
Quote by Poornima Prashanth - ತನ್ನೊಳಗೆ ಅಡಗಿರುವ ಭಾವಗಳಿಗೆ ಧಕ್ಕೆ ಬಾರದಿರಲೆಂದು ತೊಡಿಸುವ ರಕ್ಷಾ ಕವಚವೇ ಕಟುಮಾತು,, ನೇರ ನುಡಿ,,ಒರಟುತನ

ಗಟ್ಟಿಯಾಗಿ,,ಒರಟಾಗಿ,,ಕಡ್ಡಿ ಮುರಿದಂತೆ ಮಾತನಾಡೋರೆಲ್ಲ ಭಾವನೆಗಳಿಲ್ಲದ ಬರಡು ಮನದವರಲ್ಲ,,,,
Actually 
ಅತೀ ಭಾವುಕ ಜೀವಿಗಳು..!!!

#ಪೂರ್ಣಿಮ ಪ್ರಶಾಂತ್#
 - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ಹೇಳುವ ಬಯಕೆಯಿಲ್ಲ,, 
ನಿನ್ನ ಮೇಲೆ ನನಗಿರುವ ಭಾವಗಳನ್ನು...
ಆಶಿಸುವೆ ನಿನ್ನಾಂತರ್ಯವೇ  ಓದಿಬಿಡಲಿ
ನನ್ನಂತರಂಗವನ್ನು...!

#ಪೂರ್ಣಿಮ ಪ್ರಶಾಂತ್# - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ನೀ ಬದಲಾದದ್ದು 
ನಿನ್ನರಿವಿಗೆ ಬರಲೇ ಇಲ್ಲ,,,
ನಿನ್ನ ಬದಲಾವಣೆಗೆ 
ನಾ ಸ್ಪಂದಿಸುವವರೆಗೂ,,, 
ನಾ ಬದಲಾದಂತೆ 
ನಿನಗೆನಿಸುವವರೆಗೂ....!!!

#ಪೂರ್ಣಿಮ ಪ್ರಶಾಂತ್# - Made using Quotes Creator App, Post Maker App
0 likes 0 comments

Explore more quotes

Poornima Prashanth
Quote by Poornima Prashanth - ಎಲ್ಲ ಪ್ರಶ್ನೆಗಳಿಗೆ 
 ಮಾತುಗಳೇ ಉತ್ತರವೆಂದು ಎಣಿಸದಿರು 
ಕಣ್ಣಭಾಷೆಗೆ ಕಿವಿಯಾಗು
ಅಗಣಿತ ಉತ್ತರವ  ಪಡೆಯುತಿರು
ಮೌನ ಸಂಭಾಷಣೆಯಿದು ಮರೆಯದಿರು

🥰ಪೂರ್ಣಿಮ ಪ್ರಶಾಂತ್🥰
 - Made using Quotes Creator App, Post Maker App
1 likes 0 comments
Poornima Prashanth
Quote by Poornima Prashanth - ಚಿರಪರಿಚಿತನಾಗಿರು 
ಎಂದೆಂದಿಗೂ ನೀ ನಗುವಿಗೆ
ಅಪರಿಚಿತನಾಗಿ ಉಳಿದುಬಿಡು 
ಕಡೆವರೆಗೂ ನೋವಿಗೆ
                                
  #ಪೂರ್ಣಿಮಪ್ರಶಾಂತ್# - Made using Quotes Creator App, Post Maker App
1 likes 1 comments
Poornima Prashanth
Quote by Poornima Prashanth - ಮರೆಯಬೇಕೆಂದುಕೊಂಡ 
ವಿಷಯಗಳದ್ದೇ 
ಅದ್ದೂರಿ ಮೆರವಣಿಗೆ
ಸ್ಮೃತಿಪಟಲದೂರಿನಲ್ಲಿ
                  
#ಪೂರ್ಣಿಮಪ್ರಶಾಂತ್# - Made using Quotes Creator App, Post Maker App
1 likes 0 comments
Poornima Prashanth
Quote by Poornima Prashanth - ವಿವೇಕಯುತ ಪ್ರಬುದ್ಧ ಚರ್ಚೆ ಇರಲಿ
ವಿಷಯಜ್ಞಾನವಾದರೂ ಹೆಚ್ಚೀತು,,,
ಅಸಂಬದ್ಧ ವಿತಂಡವಾದ ಪ್ರಯೋಜನಕ್ಕೆ ಬಾರದು
ಸುಖಾ ಸುಮ್ಮನೆ ಸಮಯ ಹಾಳು..!!

#ಪೂರ್ಣಿಮ ಪ್ರಶಾಂತ್# - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ಪ್ರತ್ಯಕ್ಷ ಕಂಡದ್ದನ್ನು ಕಾಣಬಲ್ಲ ಕಣ್ಣುಗಳಿಗೆ
ಆದರ ಆಂತರಿಕ ಉದ್ದೇಶಗಳನ್ನರಿಯುವ 
ಪರಾಮರ್ಶಿಸಬಲ್ಲ ಒಳಗಣ್ಣುಗಳದ್ದೇ ಕೊರತೆ

#PP# - Made using Quotes Creator App, Post Maker App
1 likes 0 comments
Poornima Prashanth
Quote by Poornima Prashanth - ನಿನ್ನೊಡನೆ ಮಾತನಾಡುತ್ತಿರುವಾಗಲೂ
ನಿನ್ನ ಬಗ್ಗೆಯೇ ಮಾತನಾಡುತ್ತಿರುವಾಗಲೂ
ಮನಸಿಗೇನೋ ಹೇಳತೀರದ ಸಂಭ್ರಮ

  #ಪೂರ್ಣಿಮಪ್ರಶಾಂತ್#
 - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ಮಿತಿಮೀರಿದ ಒಳ್ಳೆತನ, 
ಕೆಟ್ಟವರಿಗೂ ತೋರೋ ಒಳ್ಳೆತನ,
ಇವು ಕಲಿಯುಗದಲ್ಲಿ 
ಮುಗ್ಧತನವಲ್ಲ,,, ಮೂರ್ಖತನ..!!

#pp# - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ಬೆಟ್ಟದಷ್ಟು ಕಲ್ಪನೆಗಳಿವೆ....
ಅದಕ್ಕೆ ದಾಸಿ ನಾನಲ್ಲ

ಕಣ್ತುಂಬಾ ಕನಸುಗಳಿವೆ
ಅದರಲ್ಲೇ ಕಳೆದು ಹೋಗಿಲ್ಲ

ಸಾಕಷ್ಟು ಕಷ್ಟನಷ್ಟಗಳಿವೆ
ಭರವಸೆಯಿಂದ  ದೂರ ಸರಿದಿಲ್ಲ

ಹೆಗಲ ಮೇಲೆ ಕರ್ತವ್ಯಗಳ ಭಾರವಿದೆ
ನಿಭಾಯಿಸಲು ಹಿಂಜರಿಯುವುದಿಲ್ಲ

ಸುಖವೂ ಇದೆ ದುಃಖವೂ ಇದೆ
ಹಿಗ್ಗದೆ ಜಗ್ಗದೆ ಹಿಂದೆ ನೋಡದೆ
ಮುನ್ನಡೆಯುವುದರಲ್ಲಿ ಎಂದೂ ಸೋತಿಲ್ಲ

     #ಪೂರ್ಣಿಮಪ್ರಶಾಂತ್# - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ಹಾಲಂಥ ಮನಸನ್ನು ಹಾಗೆಯೇ 
ಅಮೃತವಾಗಿಯೇ ಇರಲು ಬಿಟ್ಟುಬಿಡಿ,,,
ಕೋಪ ರೋಷ ದ್ವೇಷಗಳ ಹೆಪ್ಪು ಹಾಕಿ 
ರಾಕ್ಷಸತ್ವದ ವಿಷದ ಬೆಣ್ಣೆ ಕಡೆಯದಿರಿ..!

◆●◆ ಪೂರ್ಣಿಮ ಪ್ರಶಾಂತ್ ◆●◆ - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ಒಬ್ಬರನ್ನು ತನ್ನವರನ್ನಾಗಿಸಿಕೊಳ್ಳುವುದೇ ಪ್ರೇಮ ಎಂದಾಗಿದ್ದರೆ,,, ಜಗತ್ತಿನ ಉತ್ಕೃಷ್ಟ ಪ್ರೇಮಿಗಳ ಪಟ್ಟಿಯಲ್ಲಿ #ರಾಧಾ_ಕೃಷ್ಣ# ರ ಹೆಸರು ಪ್ರಪ್ರಥಮ ಸಾಲಿನಲ್ಲಿ ನಿಲ್ಲುತ್ತಲೇ ಇರಲಿಲ್ಲ..!!

ತನ್ನವರೇ ಅಲ್ಲದವರೂ ಸುಖವಾಗಿರಲಿ,, ತನಗೆ ಸಿಗದಿದ್ದರೂ ಖುಷಿಯಿಂದಿರಲಿ,, ತನ್ನನ್ನು ನೋಯಿಸಿದವರೂ ನೆಮ್ಮದಿಯಾಗಿರಲಿ ಎಂದು ಹರಸುವ,, ಸರ್ವೇ ಜನಾಃ ಸುಖಿನೋ ಭವಂತು ಎಂದು ಪ್ರಾರ್ಥಿಸುವ ನಿಸ್ವಾರ್ಥ, ವಿಶಾಲ ಮನೋಭಾವವೇ ನಿಜವಾದ  ಪ್ರೇಮ..!

🌷ಪೂರ್ಣಿಮ ಪ್ರಶಾಂತ್🌷 - Made using Quotes Creator App, Post Maker App
0 likes 0 comments

Explore more quotes

Poornima Prashanth
Quote by Poornima Prashanth - ಬೇರೆಲ್ಲೋ ನಾನೇಕೆ ಹುಡುಕಲಿ ನಿನ್ನ?
ದೂರವೆಲ್ಲೋ ಅಲ್ಲ, ನೀ ನನ್ನೊಳಗೇ ಇರುವಾಗ
ನನ್ನೆಲ್ಲ ಮಿಡಿತದಲಿ 
ನನ್ನ ಪ್ರತಿ ಶ್ವಾಸದಲಿ 
ನನ್ನೆಲ್ಲ ಆಲೋಚನೆಯಲಿ
ನನ್ನ ಜೀವದ ಕಣಕಣದಲಿ
ನೀನೇ ಆವರಿಸಿರುವಾಗ..!!
🥰💞🥰

     #ಪೂರ್ಣಿಮಪ್ರಶಾಂತ್# - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ನಿನ್ನ ಪಾದಗಳು ಸೋಕಿದ ಸಂಭ್ರಮಕ್ಕೆ
ನನ್ನ ಹೃದಯದ ರಾಜಬೀದಿಯಲ್ಲಿ ರಥೋತ್ಸವ

#ಪೂರ್ಣಿಮಪ್ರಶಾಂತ್# - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ಮುಗ್ಧ ನಿಷ್ಕಲ್ಮಶ ಸ್ನೇಹಲತೆಗೆ
ನಗು ವಿಶ್ವಾಸ ನಂಬಿಕೆ ಆತ್ಮೀಯತೆಗಳು 
ನೀರು ಗೊಬ್ಬರವಿದ್ದಂತೆ... 
ಸ್ನೇಹವನ್ನು ಪ್ರೀತಿಯಿಂದ ಪೋಷಿಸುತ್ತವೆ..

ಸುಳ್ಳು ವ್ಯಂಗ್ಯ ತಿರಸ್ಕಾರ ನಿರ್ಲಕ್ಷ್ಯಗಳು
ವಿಷವಿದ್ದಂತೆ.... ಭಾವನೆಗಳನ್ನು ಶಾಶ್ವತವಾಗಿ ಸಾಯಿಸಿಬಿಡುತ್ತವೆ...!

#ಪೂರ್ಣಿಮ ಪ್ರಶಾಂತ್# - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ನೀ ತುಂಬಿಕೊಂಡಿರುವ 
ಮನಸು ಹಗುರ
ನೀನಿಲ್ಲದ ಭ್ರಮೆಯೂ ಬಲುಭಾರ 
ನನ್ನೊಲವೇ...

#ಪೂರ್ಣಿಮ ಪ್ರಶಾಂತ್#  - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ಮಾತನ್ನು ಅಪ್ಪಿಕೊಳ್ಳಲು
ತಿಳುವಳಿಕೆ ಬೇಕು

ಮೌನವನ್ನು ಆಲಂಗಿಸಿಕೊಳ್ಳಲು
ಅದರ ಅನ್ವಯವಾಗಬೇಕು

#ಪೂರ್ಣಿಮ ಪ್ರಶಾಂತ್# - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ಇಶಾರೆಯ ನೀಡಿಬಿಡು ನನ್ನೊಲವೇ
ಮತ್ತೆ ಮೊದಲಿಂದ ಆರಂಭಿಸೋಣ
ನಮ್ಮೊಲವನು,, ಪ್ರೇಮಿಗಳ ದಿನದಂದು

ಮುಳುಗಿಯೇ ಬಿಡೋಣ ಮತ್ತೊಮ್ಮೆ
ಪ್ರೇಮದ ಆ ಸುಂದರ ಸಾಗರದಲ್ಲಿ
ಅದೇ ಪ್ರೀತಿಯಲಿ,,ಹೊಸ ರೀತಿಯಲಿ..!

❤️ಪೂರ್ಣಿಮ ಪ್ರಶಾಂತ್❤️ - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ನಿನ್ನ ಕಂಗಳ ಸಂದೇಶಕೆ      
ಹೃದಯವು ರೋಮಾಂಚಿತ    

ನಿನ್ನ ಬಿಸಿರುಸಿರ ಸ್ಪರ್ಷಕೆ
ತನು ಮನಗಳು ಪುಳಕಿತ

ನಿನ್ನ ಸನಿಹ ಸಾಂಗತ್ಯಕ್ಕೆ
ನಾ ಸಂಪೂರ್ಣ ಪರಾಜಿತ

#ಪೂರ್ಣಿಮಪ್ರಶಾಂತ್# - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ಆಚರಿಸಿಯೇಬಿಡೋಣವೇನು? 
ನಮ್ಮ ಮನಗಳು 
ಪ್ರೇಮಕ್ಕೆ ಸೋತ 
ಸಂಭ್ರಮವನು...! - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ಅನುಕ್ಷಣವೂ ಪ್ರೀತಿಸುವ 
ಮುದ್ದು ಮನಸು ನೀನು
ನಿನ್ನೆದೆಯ ಪ್ರೀತಿಯ ಚಿಪ್ಪಿನೊಳಗೆ
ಬೆಚ್ಚಗೆ ಅವಿತ ಮುತ್ತು ನಾನು

   ♡ಪೂರ್ಣಿಮ ಪ್ರಶಾಂತ್ ♡ - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ಇದ್ದದ್ದನ್ನ ಇದ್ಧಂತೆಯೇ ಬಿಂಬಿಸುವ 
ದರ್ಪಣದ ಮೇಲೆ ಎಲ್ಲರಿಗೂ ವ್ಯಾಮೋಹ
ಅದೇ ಕೆಲಸವನ್ನು ಮಾಡುವ
ಜನರ ಮೇಲೆ ಮಾತ್ರ ಬೇಡದ ಸನ್ನಾಹ

   #ಪೂರ್ಣಿಮಪ್ರಶಾಂತ್# - Made using Quotes Creator App, Post Maker App
0 likes 0 comments

Explore more quotes

Poornima Prashanth
Quote by Poornima Prashanth - ಎಲ್ಲರಿಗೂ ಎಲ್ಲ ಸಮಯದಲ್ಲೂ 
ಮೌನಭಾಷೆ ಅರ್ಥವಾಗೋಲ್ಲ.
ಅಗತ್ಯ ಸಂದರ್ಭದಲ್ಲಿ,, ಅಗತ್ಯ ಸ್ಥಳದಲ್ಲಿ,, ಅಗತ್ಯವಿದ್ದಷ್ಟು ಅಭಿಪ್ರಾಯಗಳನ್ನು,, 
ಅಗತ್ಯ ರೀತಿಯಲ್ಲಿ  ಸ್ಪಷ್ಟಪಡಿಸೋದು 
ಅತ್ಯಗತ್ಯ...!!

😊ಪೂರ್ಣಿಮ ಪ್ರಶಾಂತ್😊 - Made using Quotes Creator App, Post Maker App
3 likes 0 comments
Poornima Prashanth
Quote by Poornima Prashanth - #ಗೆಲ್ಲೋದು_ಪ್ರೀತಿನಾ_ಅಧಿಕಾರನಾ?

ನಮ್ಮ ಮಕ್ಕಳು ನಮ್ಮಿಂದ ಬಂದವರಷ್ಟೇ.... 
ಅವರ ಬದುಕಿನ ಸ್ವಾತಂತ್ಯ ಅವರದ್ದೇ....
ಅವರ ಲಾಲನೆ ಪಾಲನೆ ಪೋಷಣೆ,  ಮಾರ್ಗದರ್ಶನ ನೀಡುವುದು, ತಪ್ಪುಗಳನ್ನು ತಿದ್ದುವುದು, ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡುವುದು, ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ...... 
ಮಕ್ಕಳಿಗೆ ಒಳ್ಳೆಯ ಸ್ನೇಹಿತರಾಗಿ ಪ್ರೀತಿಯಿಂದ ಅವರನ್ನು ಗೆಲ್ಲಬಹುದೇ ವಿನಃ ಅಧಿಕಾರ ಚಲಾವಣೆಯಿಂದ ಯಾವುದೇ ಪ್ರಯೋಜನವಿಲ್ಲ....
      
#ಪೂರ್ಣಿಮಪ್ರಶಾಂತ್# - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ನಮ್ಮ ಸುತ್ತಲೂ ನಡೆಯುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಯಾವುದನ್ನೂ 
ಅತಿಯಾಗಿ ನಿಯಂತ್ರಿಸಲು ಬಯಸದೆ,,
ಏನೂ ತಿಳಿಯದವರಂತೆ, 
ಯಾವುದನ್ನೂ ಕೆದಕದೆ ಸುಮ್ಮನಿದ್ದಾಗಲೇ,, 
ಎಷ್ಟೋ ಸತ್ಯಗಳು ಬೆಳಕಿಗೆ ಬರುತ್ತವೆ...
ಮುಂದಿನ ಬದುಕಿನ ಹಾದಿಗೆ ದಾರಿದೀಪವಾಗುತ್ತವೆ..!
        
#ಪೂರ್ಣಿಮಪ್ರಶಾಂತ್# - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ಬಿಡುವಿಲ್ಲದ ಮಾತು ಕಿರಿಕಿರಿ ಎನಿಸಬಹುದು
ಆದರೆ ಮೌನ ಹಾಗಲ್ಲ
ಮೌನವಾಗಿ ಏಕಾಂತದಲ್ಲಿದ್ದಾಗಲೇ
ನಮ್ಮ ಹೃದಯ ನಮಗಾಗಿ ಮಿಡಿವ ಆ ಶಬ್ಧ
ನಮಗೇ ಕೇಳೋದು,, ಹಿತ ಎನಿಸೋದು..!
ಆಗಾಗ ನಮ್ಮೊಳಗೆ ನಾವು ಪ್ರವೇಶಿಸಬೇಕು
ಮೌನ ಸಂಭಾಷಣೆ ನಡೆಸಬೇಕು
ನಮ್ಮೊಡನೆ ನಾವೇ ಇದ್ದು ಸಂತೋಷಿಸಬೇಕು
ಮನಸ್ಸನ್ನು ಶುದ್ಧಗೊಳಿಸಿ ಹಗುರಾಗಬೇಕು.

#ಪೂರ್ಣಿಮ ಪ್ರಶಾಂತ್ # - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ನಿಷ್ಠುರತೆ ಅಪರಾಧವಲ್ಲ..! 
ಅಸಲಿಗೆ,
ನಿಷ್ಠುರವಾದಿಯಾಗಿರಲು
ಅಥವಾ
ಮತ್ತೊಬ್ಬರ ನಿಷ್ಠುರತೆ  ಸಹಿಸಲು
ಬಹಳ ತಾಕತ್ತು ಬೇಕು.

#ಪೂರ್ಣಿಮ ಪ್ರಶಾಂತ್# - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ಅಂತರಂಗದ ಭಾವಗಳನು ಕವಿತೆಯಾಗಿಸಹೊರಟೆ.. 
ಬಿಳಿಹಾಳೆಯು ಕಾಮನಬಿಲ್ಲಾಯಿತು ಅರೆಕ್ಷಣದಲಿ,, 
ಮನದಲಿ ಘಮಿಸುತಿದ್ದ ನನ್ನವನ ಪ್ರೇಮಸುಮದಿಂದ...

ಕಂಗಳು ಹೊಳೆಯುತಿವೆ,ಕೆನ್ನೆಯು ರಂಗೇರುತಿದೆ,,
ಹೃದಯ ಹಾರುತಿದೆ ಮನದ ಮುಗಿಲಿನಲಿ,,, 
ಅವನಿರುವ ಅಕ್ಷರಗಳೂ 
ನನ್ನನೇ ಮುದ್ದಿಸಲು...

◆♡◆ ಪೂರ್ಣಿಮ ಪ್ರಶಾಂತ್ ◆♡◆ - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ಹತ್ತಿರ ಇರುವವರ ಮೇಲೆ ನಂಬಿಕೆ ವಿಶ್ವಾಸ...
ದೂರದಲ್ಲಿರುವವರ ಮೇಲೆ 
ಅದೇನೋ ಅನುಮಾನ..!!
ದುರಂತವೆಂದರೆ,,, 
ಕೆಡುಕಾಗುವುದು,,,, 
ಹತ್ತಿರದವರಿಂದಲೇ,, 
ನಾವು ನಂಬಿದವರಿಂದಲೇ ಹೊರತು,, ದೂರದವರಿಂದಲ್ಲ....!

           ◆●◆ ಪೂರ್ಣಿಮ ಪ್ರಶಾಂತ್ ◆●◆ - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ಸ್ವರ್ಗ ನರಕಗಳ ಪರಿಚಯ ನನಗಿಲ್ಲ
ಪುನರ್ಜನ್ಮದ ಬಗ್ಗೆ ನಂಬಿಕೆಯೂ ಎನಗಿಲ್ಲ 
ಸತ್ತ ನಂತರ ಆತ್ಮ ಏನಾಗುವುದೋ ತಿಳಿದಿಲ್ಲ
ನನಗೆ ತಿಳಿದಿರುವುದಿಷ್ಟೇ, ನನ್ನ ನಿಯಮವಿಷ್ಟೇ,,,
ನನಗೆ ಅರಿವಿದ್ದೂ ನಾನಾರನ್ನೂ ನೋಯಿಸುವುದಿಲ್ಲ,,
ನಿಂದಿಸುವುದಿಲ್ಲ,, ವಂಚಿಸುವುದಿಲ್ಲ,, ಕನಸಲ್ಲೂ ಕೆಡುಕು ಬಯಸುವುದಿಲ್ಲ,, ಉಪಕಾರ ಮಾಡದಿದ್ದರೂ ಅಪಕಾರವನ್ನಂತೂ  ಮಾಡುವುದಿಲ್ಲ.....
ನನ್ನವರಿಂದ ನಾ ಬಯಸುವುದೂ ಕೇವಲ ಇಷ್ಟನ್ನೇ..!!  
 
#ಪೂರ್ಣಿಮಪ್ರಶಾಂತ್# - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ಕೂಡಿಟ್ಟ ಕಣ್ಣ ಹನಿಗಳು ಜಾರಿಹೋದವು
ನಿನ್ನ ಪ್ರತಿಬಿಂಬವು ನನ್ನ ಕಣ್ಣನಾವರಿಸಲು

•♡• ಪೂರ್ಣಿಮ ಪ್ರಶಾಂತ್ •♡• - Made using Quotes Creator App, Post Maker App
0 likes 0 comments
Poornima Prashanth
Quote by Poornima Prashanth - ಏನು ಹೇಳಲೋ ನಿನ್ನ ಪ್ರೇಮದ ಪರಿಗೆ?? 

ನೀನೇ ನನ್ನ ಜೀವ ಎಂದವನು,,, 
ನಿನ್ನ ಮಿಡಿತವನು ನನ್ನ ಹೃದಯದಲ್ಲಿಟ್ಟೆ:
ಆ ಹೃದಯವನೇ ನೀ ಅಪಹರಿಸಿಬಿಟ್ಟೆ...!

   #ಪೂರ್ಣಿಮಪ್ರಶಾಂತ್# - Made using Quotes Creator App, Post Maker App
0 likes 0 comments

Explore more quotes