SHOBHA PARAMESH profile
SHOBHA PARAMESH
1 1 0
Posts Followers Following
SHOBHA PARAMESH
Quote by SHOBHA PARAMESH - ದೀಪಾರಾಧನೆ 
ಅಜ್ಞಾನದ ಅಂದಕಾರವನ್ನು ಅಳಿಸಿ 
 ಸುಜ್ಞಾನದ ಬೆಳಕನ್ನು ಬೀರಿ 
 ಮನುಕುಲದ ಒಳಿತಿಗಾಗಿ ಹರಸು ಎಂದು ಬೇಡುತ್ತಾ ಭಗವಂತನ ಕೃಪೆಗಾಗಿ ದೀಪಗಳ ಹಚ್ಚೋಣ ಬನ್ನಿ!!
 ಮನಸ್ಸು ಮನಸ್ಸುಗಳ ಬೆಸೆದು 
 ಕನಸು ಕನಸುಗಳ ಹೊಸೆದು
 ಸನ್ಮಾರ್ಗದಲ್ಲಿ ಸದಾ ನಡೆಸು ಎಂದು ಬೇಡುತ್ತಾ 
 ಭಗವಂತನ ಕೃಪೆಗಾಗಿ ದೀಪಗಳ ಹಚ್ಚೋಣ ಬನ್ನಿ!! 
 ನಶ್ವರ ಬದುಕಿನ ಅರಿವು ಮೂಡಿಸಿ 
 ಶಾಶ್ವತ ಜೀವನದ ದಾರಿ ತೋರಿಸಿ 
 ಕೋಪ ದ್ವೇಷಗಳ ಓಡಿಸು ಎಂದು ಹೇಳುತ್ತಾ 
 ಭಗವಂತನ ಕೃಪೆಗಾಗಿ ದೀಪಗಳ ಹಚ್ಚೋಣ ಬನ್ನಿ!! 

ಶೋಭಪರಮೇಶ್ - Made using Quotes Creator App, Post Maker App
2 likes 0 comments