Chethana Bhargava profile
Chethana Bhargava
120 6 1
Posts Followers Following
Chethana Bhargava
Quote by Chethana Bhargava - ಉಪಚಾರ

ಮಾಡದಿದ್ದರೂ ತೊಂದರೆ ಇಲ್ಲ ಉಪಚಾರ
ಆಗತಿರಲಿ ನಮ್ಮಿಂದ  ಅಪಚಾರ
ಬಿಡಬೇಕು ನಮ್ಮಯ ಅಹಂಕಾರ
ನೀಡೋಣ ಎಲ್ಲರಿಗೂ ಸಹಕಾರ
ಮಾಡಬೇಡಿ ಯಾರಿಗೂ ಅಪಕಾರ
ಅಗತ್ಯವಿದ್ದವರಿಗೆ ಮಾಡಿ ಉಪಕಾರ

- ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ಮುಖವಾಡ

ನಗುವಿನ ಮುಖವಾಡ ಹಾಕುವುದು ಅನಿವಾರ್ಯ
ನೋವ ಮರೆಯುತ ತೋರಬೇಕು ಧೈರ್ಯ
ಕಾಣದು ಯಾರಿಗೂ ಅಂತರಂಗದ ಸೌಂದರ್ಯ
ಜಗವೇಕೆ ಹೀಗೆ ಎಂದಾಗುತಿದೆ ಆಶ್ಚರ್ಯ

ಕಾರ್ಯ ಸಾಧನೆಗಾಗಿ ಒಳ್ಳೆಯತನದ ಮುಖವಾಡ
ಮನದಲ್ಲಿ ತುಂಬಿಹುದು ಆತಂಕ ದುಗುಡ
ಭಯ ಹೆಚ್ಚಾದರೆ ಸಂಭವಿಸುವುದು ಅವಘಡ
ಸತ್ಯ ಅನಾವರಣವಾದರೆ ನಡುಗುವರು ಗಡಗಡ

ನ್ಯಾಯನೀತಿ ಪ್ರಾಮಾಣಿಕತೆಗೆ ಸೋಲೆಂದು ಇಲ್ಲ
ಸ್ವಾರ್ಥ ವಂಚನೆ ತುಂಬಿ ತುಳುಕುತಿದೆಯಲ್ಲ
ಕಳಚುವುದೊಂದು ದಿನ ಹಾಕಿದ ಮುಖವಾಡ
ಆಗಪಡುವ ಪಾಡು ಯಾರಿಗೂ ಬೇಡ
-ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ಆಡಂಬರ
ಆಡಂಬರದ ಜೀವನವನು ಬಯಸುವ ಮನುಜ
ಸರಳತೆಯ ಬದುಕನು ಕಡೆಗಾಣಿಸುವುದು ಸಹಜ

ಹಣವಿದ್ದಾಗ ಹಿಂದೆ ಬರುವರು ಜನರು
 ಹಣವಿಲ್ಲದಿದ್ದರೆ ಅದೇ ಜನರು ದೂರ ಹೋಗುವರು

ಹಾಸಿಗೆ ಇದ್ದಷ್ಟೇ ಕಾಲ ಚಾಚಬೇಕು
ಸರಳವಾದ ಜೀವನವನ್ನು ಸಾಗಿಸಬೇಕು

ಜೊತೆಗಿರಲಿ ಗೆಳೆಯರ ಪ್ರೀತಿ ಮಮತೆಯ ಝೇಂಕಾರ
ಬಾಳಲ್ಲಿ ತುಂಬಿರಲಿ ಸಂತೋಷ ಸಡಗರ

ಮರೆಯಾಗಲಿ ನಾನು ನನ್ನದೆಂಬ ಅಹಂಕಾರ
ಮಿತಿಯಲಿ ಇರಲಿ ಆಡಂಬರದ ಅಬ್ಬರ

-ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ತುಳಸಿ
ಮನೆಯಂಗಳದಿ ಬೆಳೆದಿರುವುದು ತುಳಸಿ
ನಮ್ಮ ಶ್ರೀ ಹರಿಯ ಅರಸಿ
ಇರುವಳು ಚಂದದ ಕಟ್ಟೆಯೊಳಗೆ
ಕಂಗೊಳಿಸುವಳು ಹಸಿರು ಹೊದಿಕೆಯೊಳಗೆ

ಕಾತ್ತಿಕಾಮಾಸದ ದ್ವಾದಶಿಯಂದು
ಆಚರಿಸುವರು ತುಳಸಿ ಹಬ್ಬವೆಂದು
ಬಿಡಿಸುವರು ಅಂದ ಚಂದದ ರಂಗೋಲಿ
ಸುತ್ತಿ ಹಚ್ಚಿಡುವರು ಪ್ರಭಾವಳಿ

ನೆಲ್ಲಿ ಹುಣಸೆ ಹೂವಿನೊಂದಿಗೆ ಅಲಂಕರಿಸಿ
ತುಳಸಿ ಕಲ್ಯಾಣ ಆಚರಿಸಿ
ನಾರಾಯಣನ ಕೃಪೆಗೆ ಪಾತ್ರರಾಗುವರು
ಜೀವನ ಪಾವನ ಮಾಡಿಕೊಳ್ಳುವರು

ತಿಳಿಯಿರಿ ತುಳಸಿಯ ಮಹತ್ವ
ಇದರಲ್ಲಿರುವುದು ರೋಗವರ್ಧಕ ಸತ್ವ
ಅಂಗಳದಿ ಇರುವ ಶ್ರೇಷ್ಠ ಸಸ್ಯ
ಬಳಸೋಣ ಪ್ರತಿ ನಿತ್ಯ

           -ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ನಿರಾಸೆಯ ಬಿಟ್ಟು ಸಾಗಬೇಕು

ಜೀವನದಲ್ಲಿ ಸೋತಾಗ ನಿರಾಸೆ ಆಗುವುದು ಸಹಜ
ನಿರಾಸೆಯ ಬಿಟ್ಟು ಮುಂದೆ ಸಾಗಬೇಕು ಮನುಜ
ಸೋಲೆ ಗೆಲುವಿನ ಸೋಪಾನ
ನಿರಂತರ ಸಾಧನೆಗೆ ಯಜಮಾನ
 - ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - *ಕ* ರುನಾಡ ಕನ್ನಡ ಭಾಷೆ ಅಂದ
 *ಕಾ* ವೇರಿ ಹರಿಯುವುದ ನೋಡುವುದೇ ಚೆಂದ
 *ಕಿ* ವಿಗೆ ಕೇಳಲು ಕನ್ನಡ ಇಂಪು
 *ಕೀ* ರ್ತಿಯು ಹರಡುತ ಸೂಸುತಿದೆ ನೆಲದ ಕಂಪು
 *ಕು* ಣಿದಾಡುತ ಕನ್ನಡವ ಕಲಿ
 *ಕೂ* ಡಿ ನಾಡಗೀತೆಯ ಹಾಡಿ ನಲಿ
 *ಕೃ* ಷ್ಣೆ ಗಂಗೆ ಹರಿಯುತಿಹರು ಇಲ್ಲಿ
 *ಕೆ* ತ್ತನೆ ಶಿಲ್ಪ ಕಲೆಗೆ ಹೆಸರುವಾಸಿ ನೋಡಿಲ್ಲಿ
 *ಕೇ* ಕೆ ಹಾಕುತಾ ವರ್ಣಿಸಿ ನಮ್ಮ ಕನ್ನಡಾಂಬೆಯ
 *ಕೈ* ಮುಗಿದು ಆರಾಧಿಸಿರಿ ಭುವನೇಶ್ವರಿಯ
 *ಕೊ* ನೆ ಉಸಿರಿರುವವರೆಗೂ ಕನ್ನಡವ ಮರೆಯದಿರಿ
 *ಕೋ* ರಿಕೆ ನಿಮಗೆ ಕನ್ನಡಿಗನ ಅವಮಾನಿಸದಿರಿ
 *ಕೌ* ತುಕವೆನಿಸುವುದು ಈ ಭಾಷೆಯ ಜ್ಞಾನ
 *ಕಂ* ದನಿಗೂ ಭಾಷಾಭಿಮಾನವ ಮೂಡಿಸೋಣ
 *ಕಃ* ಎನ್ನುವ ಅನ್ಯಭಾಷಿಗರಿಗೂ ಕನ್ನಡವ ಕಲಿಸೋಣ
       - ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ಬಾಳ ಪಯಣದ ಅಂಬಿಗ
ಹೊತ್ತಿರುವನು ಸಂಸಾರದ ನೊಗ
ಅಪ್ಪ ಸಹೋದರ ಪತಿ ಮಗ
ಬದುಕಿನ ಅಲೆಯೊಡನೆ ಗುದ್ದಾಡುವ ಈಜುಗ

ರಾತ್ರಿ ಹಗಲೆನ್ನದೆ ದುಡಿಯುವನು
ಕಷ್ಟಗಳನ್ನು ಮರೆಮಾಚುವನು
ಪುರುಷನ ಪಾತ್ರ ಯಾರಿಗೂ ಕಾಣದು
ಸವೆದಿದವನ ಜೀವನ ಸಂಸಾರಕ್ಕೆ ದುಡಿದು

ಗಂಡು ಹೆಣ್ಣು ಇಬ್ಬರೂ ಸಮಾನರು
ಬಾಳ ಬಂಡಿಯಲ್ಲಿನ ಜೊತೆಗಾರರು
ಹೆಣ್ಣಿನ ಯಶಸ್ಸಿನ ಪಾಲುದಾರನು
ತಾನು ಉರಿದು ಬೆಳಕ ನೀಡುವನು ಪುರುಷನು

ಪುರುಷರ ದಿನದ ಶುಭಾಶಯಗಳು

-ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ಕ್ರಿಕೆಟ್
ಇಂದು ವಿಶ್ವಕಪ್ ಫೈನಲ್ ನ   ಹಣಾಹಣಿ
ಭಾರತಕ್ಕೆ ಒಲಿಯಲಿ ಮುಕುಟಮಣಿ 
ಪ್ರದರ್ಶನವು ಉತ್ತಮವಾಗಿ ಮೂಡಿಬರಲಿ
ಎಲ್ಲಾ ಆಟಗಾರರಿಗೂ ಶುಭವಾಗಲಿ
       - ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ಪ್ರತಿಭೂತಿ
ಭರವಸೆಯೇ ಬಾಳಿನ ಪ್ರತಿಭೂತಿ
ಸಂಬಂಧಗಳ ನಡುವೆ ಇರಬೇಕು ಪ್ರೀತಿ
ಜೀವನದಲ್ಲಿ ಅಳವಡಿಸಿಕೊಳ್ಳಬೇಕು ನೀತಿ
ನೀತಿ ಮರೆತು ಬದುಕಿದರೆ ಶುರುವಾಗುವುದು ಭೀತಿ
ಭೀತಿ ಹೆಚ್ಚಾದರೆ ಕೆಡುವುದು ಮನುಜನ ಮನಸ್ಥಿತಿ
ಭಾವನೆಗಳ ವ್ಯಕ್ತಪಡಿಸಬಹುದು ನಾನಾ ರೀತಿ
ಮಿತಿಮೀರಿದ ನಡವಳಿಕೆ ತರುವುದು ಅವನತಿ
ಕಠಿಣ ಪರಿಶ್ರಮದಿಂದ ಸಾಧ್ಯ ಪ್ರಗತಿ
ಮರೆಯಾಗದಿರಲಿ ನಮ್ಮ ಸಂಸ್ಕೃತಿ
ಭಗವಂತನ ಭಕ್ತಿಯಿಂದ ಪೂಜಿಸಿದರೆ ಸಿಗುವುದು ಸದ್ಗತಿ

-ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - 
ಬಳೆ
ಹೆಣ್ಣಿನ ಸೌಂದರ್ಯವ ಹೆಚ್ಚಿಸುವುದು ಆಕೆಯ ಕೈಬಳೆ
ತರುವುದು ಆ ಸದ್ದು ಮನಕ್ಕೆ ಹರುಷದ ಹೊಳೆ
ಮುತ್ತೈದೆಗೆ ಇದುವೇ ಭಾಗ್ಯದ ಹೊಳೆ
ಬಳೆ ತೊಟ್ಟ ನಾರಿಯ ಮೊಗದಲ್ಲಿ ತುಂಬಿರುವುದು ಕಳೆ

ಹುಟ್ಟಿದಾಗ ಮಗುವಿಗೆ ಹಾಕುವರು ದೃಷ್ಟಿ ಬಳೆ
ಮದುಮಗಳಿಗೆ ತೊಡಿಸುವರು ಗಾಜಿನ ಬಳೆ
ಸೀಮಂತದ ಸಂಭ್ರಮಕೆ  ಮೆರಗು ನೀಡುವುದು ಹಸಿರು ಬಳೆ
ಮಕ್ಕಳಿಗೆ ಸಂಜೆ ತಿನ್ನಲು ಬೇಕು ಕೋಡುಬಳೆ

ಗತಕಾಲದಲ್ಲಿ ಮನೆಗೆ ಬಳೆಗಾರ ಬರುತ್ತಿದ್ದ 
ಬಣ್ಣ ಬಣ್ಣದ ಬಳೆಗಳ ಹೊತ್ತು ತರುತ್ತಿದ್ದ
ಕೈಯಲ್ಲಿ ತೊಟ್ಟ ಬಳೆ ಶಕ್ತಿಯ ಸಂಕೇತ
ಈ ನಮ್ಮ ಸಂಸ್ಕೃತಿಯ ಉಳಿಸಿಕೊಳ್ಳುವ ಅನವರತ
-ಚೇತನ ಭಾರ್ಗವ - Made using Quotes Creator App, Post Maker App
0 likes 0 comments

Explore more quotes

Chethana Bhargava
Quote by Chethana Bhargava - 

ಚಾರ್ಲಿಚಾಪ್ಲಿನ್ ಬಣ್ಣವ ಹಚ್ಚುತ ನೋವನು ಮರೆಮಾಚಿದ
ನಗುವಿನ ಮುಖವಾಡ ಧರಿಸಿ ಎಲ್ಲರನ್ನೂ ರಂಜಿಸಿದ
ಮನರಂಜನ ಲೋಕದಲ್ಲಿ ಪಾತರಗಿತ್ತಿಯಂತೆ ಮನಗಳಲ್ಲಿ ಹಾರಾಡಿದ
ಕಪ್ಪುಬಿಳುಪಿನಲ್ಲಿಯೇ ಚಿಟ್ಟೆಯಂತೆ ಬಣ್ಣದ ಭಾವನೆಯ ಸೆರೆಹಿಡಿದ

-ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ನಮ್ಮ ಅಪ್ಪು
ಮೆರೆದಿರಿ ಹೃದಯ ಶ್ರೀಮಂತಿಕೆಯ ಸಿರಿತನ
ಮರೆಯಾಗಲು ಸಾಧ್ಯವಿಲ್ಲ ನಿಮ್ಮ ಹಿರಿತನ
ಎಲ್ಲಾರೊಂದಿಗೆ ಬೆಸೆದಿರುವಿರಿ ಗೆಳೆತನ
ನಿಮ್ಮದೊಂದು ಆದರ್ಶ ಜೀವನ

ಬಂದಿರಿ ಲೋಹಿತನಾಗಿ ಬದಲಾದಿರಿ ಪುನೀತನಾಗಿ
ಉಳಿದಿರಿ ನಮ್ಮ ಮನದಲ್ಲಿ ಶಾಶ್ವತವಾಗಿ
ಸದಾ ಹೊಳೆಯುವ ಧ್ರುವ ನಕ್ಷತ್ರ ನಮ್ಮ ಅಪ್ಪು
ನಿಮ್ಮ ನಗೆ ನೆನಪಿಗಿರದು ಎಂದೂ ಮುಪ್ಪು

ನಟನೆಯಲ್ಲಿ ಚಾಣಕ್ಯ
ಎಂದೂ ಮರೆಯದ ಮಾಣಿಕ್ಯ 
ನಿಮ್ಮಿಂದ ಲಭಿಸಿತು ಚಿತ್ರರಂಗಕ್ಕೆ ಪವರ್
ಅಪ್ಪನಂತೆ ಏರಿದಿರಿ ಕೀರ್ತಿಯ ಟವರ್
ನೀವೇ ಕರುನಾಡಿನ ನೆಚ್ಚಿನ ಸ್ಟಾರ್
         -ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ಭೂಮಿ ಹುಣ್ಣಿಮೆ
ಶರದೃತುವಿನ ಆಶ್ವೀಜ ಮಾಸದ ಹುಣ್ಣಿಮೆ
ಹಸಿರ ಸಿರಿಯ ಹೊತ್ತು ನಿಂತಿಹಳು ಭೂರಮೆ
ಉತ್ತಿ ಬಿತ್ತಿದ ಬೀಜ ಫಸಲು ನೀಡುವ ವೇಳೆ 
ಭೂಮಿತಾಯಿಗೆ ಸೀಮಂತದ ಹೊಂಬಾಳೆ 

ವಿವಿಧ ಬಗೆಯ ಅಡಿಗೆ ಮಾಡಿ
ಭೂದೇವಿಗೆ ಬಾಗಿನ ನೀಡಿ
ಕುಂಕುಮ ಹೂಗಳಿಂದ ಇಳೆಯನು ಶೃಂಗರಿಸುವ
ಅನ್ನ ನೀಡುವ ದೇವಿಗೆ ಕೃತಜ್ಞತೆ ಸಲ್ಲಿಸುವ

ರೈತ ಹರಸಿದ ಬೆವರು ಫಲಿಸಿ
ಬೆಳೆಯ ಫಸಲು ನಿಂತಿದೆ ನಳನಳಿಸಿ
ಹಚ್ಚ ಹಸಿರಿನ ಧರೆಯ ಸೊಬಗು
ರೈತನ ಮೊಗದಲ್ಲಿ ಮೂಡಿದೆ ಮೆರಗು

ವಾತಾವರಣದ ವೈಪರೀತ್ಯಕ್ಕೆ ಸಂಭವಿಸಬಹುದು ವಿಪತ್ತು
ಎದುರಾಗದಿರಲಿ ಯಾವುದೇ ಆಪತ್ತು
ಎಂಬ ಕಾರಣದಿ ಪೂರ್ವಿಕರು
ಸಂಪ್ರದಾಯವ ಮಾಡಿಹರು
ಭೂಮಿ ಹುಣ್ಣಿಮೆಯ ಆಚರಿಸುವರು
       -ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ಚಂದ್ರಗ್ರಹಣ
ಸೂರ್ಯ ಭೂಮಿ ಚಂದ್ರ ಸಂಧಿಸಿದ ಕ್ಷಣ
ಸಂಭವಿಸುವುದು ಆಗಸದಿ ಚಂದ್ರಗ್ರಹಣ
ಅಂತರಿಕ್ಷದಿ  ಸಹಜ ವಿದ್ಯಮಾನ
ಭೂಛಾಯೆಯು ಕವಿದಿರುವುದು ಚಂದಿರನ

ತುಂಬು ಚಂದಿರನಿಗಿದು ಬೆಳಗೋ ಹುಣ್ಣಿಮೆ
ತನ್ನ ನೆರಳ ಮುಸುಕುವಳು ತಾಯಿ ಭೂರಮೆ
ಕಟ್ಟದಿರುವ ಇದಕ್ಕೆ ನಾವು ಮೌಡ್ಯತೆಯ ಬಣ್ಣ
ನೋಡುವ ಗ್ರಹಣ ತೆರೆಯುತ ವಿಜ್ಞಾನದ ಕಣ್ಣ

ಒಂದೇ ನೇರದಿ ಬಂದಿಹರು ಸೂರ್ಯ ಚಂದ್ರರು
ಭೂರಮೆಯ ಜೊತೆ ನಿಂತಿಹ ಪ್ರೀತಿ ಪಾತ್ರರು
ಚಂದ್ರನೆಂದೂ ಮಾಡುವ ಭೂತಾಯಿಗೆ ಪ್ರದಕ್ಷಿಣೆ
ನೆರಳು ಬೀಳುವ ಈ ಕ್ಷಣಕೆ ಅದೇನು ಆಕರ್ಷಣೆ
       -ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ಭಯ
ಅತಿಯಾದ ಅಮೃತ ವಿಷವಾಗಬಹುದೆಂಬ ಭಯ
ಸುಖ ಹೆಚ್ಚಾದರೆ ದುಃಖ ಕಾದಿದೆಂಬ ಭಯ
ಮಾತು ಅತಿಯಾದರೆ ಜಗಳವಾಗಬಹುದೆಂಬ ಭಯ
ಮೌನವಾಗಿದ್ದರೆ ಅಪವಾದ ಕ್ಕೀಡಾಗಬಹುದೆಂಬ ಭಯ

ನಿರೀಕ್ಷೆ ಹೆಚ್ಚಾದರೆ ನಿರಾಸೆಯ ಭಯ
ಅತಿಯಾದ ನಲಿವು ನೋವಿಗೆ ಕಾರಣವಾಗಬಹುದೆಂಬ ಭಯ 
ಮಿತಿಯನರಿತು ಬದುಕಿದರೆ  ಸಿಗುವುದು ಸಂತೋಷವು
ನೆಮ್ಮದಿಯ ಬಾಳಿಗೆ ಆಗುವುದು ಕಾರಣವು
-ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ಭಯ
ಅತಿಯಾದ ಅಮೃತ ವಿಷವಾಗಬಹುದೆಂಬ ಭಯ
ಸುಖ ಹೆಚ್ಚಾದರೆ ದುಃಖ ಕಾದಿದೆಂಬ ಭಯ
ಮಾತು ಅತಿಯಾದರೆ ಜಗಳವಾಗಬಹುದೆಂಬ ಭಯ
ಮೌನವಾಗಿದ್ದರೆ ಅಪವಾದ ಕ್ಕೀಡಾಗಬಹುದೆಂಬ ಭಯ

ನಿರೀಕ್ಷೆ ಹೆಚ್ಚಾದರೆ ನಿರಾಸೆಯ ಭಯ
ಅತಿಯಾದ ನಲಿವು ನೋವಿಗೆ ಕಾರಣವಾಗಬಹುದೆಂಬ ಭಯ 
ಮಿತಿಯನರಿತು ಬದುಕಿದರೆ  ಸಿಗುವುದು ಸಂತೋಷವು
ನೆಮ್ಮದಿಯ ಬಾಳಿಗೆ ಆಗುವುದು ಕಾರಣವು
-ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ಹೊಸ ಬದುಕು
ಹರಿಯುತ್ತಿರುವ ನೀರಿನಂತೆ ಬದುಕು
ಕಷ್ಟಕಾರ್ಪಣ್ಯಕ್ಕೆ ಹೆದರದೆ ಸಾಗುತಿರಬೇಕು
ನೊಂದ ಮನಕೆ ಧೈರ್ಯವ ತುಂಬುತ
ಮುನ್ನುಗೋಣ ಹೊಸ ಕನಸ ಅರಸುತ

ಬದುಕು ಬಲು ಭಾರ
ಚಲಿಸುವ ದಾರಿ ದೂರ
ನೋವು ನಲಿವುಗಳ ಸಮನಾದ ಸ್ವೀಕಾರ
ಅನಿಸದು ಬದುಕೊಂದು ದುಸ್ತರ

ಕತ್ತಲೆ ಬೆಳಕುಗಳೆರಡು ಬದುಕಲಿ  ಸಹಜ
ಇದನ್ನು ಅರಿತು ನಡೆಯಬೇಕು ಮನುಜ
ನೆಮ್ಮದಿಯಲಿ ಸಾಗಲಿ ಬಾಳಿನ ಸಂಚಾರ
ಮೊಳಗಲಿ ಪ್ರೀತಿಯ ಝೇಂಕಾರ

ಚಿಂತೆಗಳ ಬವಣೆಯಲಿ ಸವೆಸದಿರಿ ಆಯಸ್ಸು
ಶ್ರದ್ಧೆಯಿಂದ ಕೆಲಸ ಮಾಡಿದರೆ ಸಿಗುವುದು ಯಶಸ್ಸು
ನಂಬಿಕೆ ಭರವಸೆಯೇ ಬಾಳಿನ ಬೆಳಕು
ಆತ್ಮ ವಿಶ್ವಾಸದ ಶುರು ಮಾಡೋಣ ಹೊಸ ಬದುಕು

     -ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ಕಾರಿರುಳು 
ಕವಿದಿದೆ ಸುತ್ತಲೂ ಕಗ್ಗತ್ತಲ ಕಾರಿರುಳು 
ಅಜ್ಞಾನವು ಎಳೆದಿದೆ ಕೊರಳಿಗೆ ಉರುಳು 
ಮೌಢ್ಯವು ಕವಿಸಿದೆ ಬುದ್ಧಿಗೆ ಮರುಳು 
ಬಾಯಾರಿದೆ ಜೀವ ಸುತ್ತಲೂ ಬೆಂಗಾಡಿನ ಮರಳು 

ಹೊಳೆಯಲಿ ಇರುಳಲಿ ಜ್ಞಾನದ ಬೆಳಕು 
ಆಸೆ ವ್ಯಾಮೋಹಗಳ ಮನವು ಬಿಡಬೇಕು 
ಗಹನವು ಅರಿಯಲು ಕರ್ಮದ ಗತಿಯು 
ಮುಳುಗದೆ ಮಾಯೆಯ ಪ್ರಭಾವದಿ ಮತಿಯು 

ಸಾಧನೆಯೇ ದೀವಿಗೆ ಕಾರಿರುಳ ಕತ್ತಲೆಗೆ 
ಅಹಂನ ವೇಷ ಕಳಚಿ ಎದಿರಾಗುವ ಬೆತ್ತಲೆಗೆ 
ನಮ್ಮ ನಾವು ಅರಿತರೆ ಅದೇ ಮುಕ್ತಿ 
ಕಾರಿರುಳ ಕಮರಿಸಲು ಜ್ಙಾನವೇ ನಿಜ ಶಕ್ತಿ 
~ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ಬಿಸಿಲ್ಗುದುರೆ
ಓಡುತ್ತಿರುವುದು ಮನ ಬಿಸಿಲ್ಗುದುರೆಯ ಹಿಂದೆ 
ದುರಾಸೆ ಹೆಚ್ಚಾದರೆ ಕಾದಿದೆ ವಿನಾಶ ಮುಂದೆ
ನಾಳೆಯ ಭ್ರಮೆಯಲಿ ವರ್ತಮಾನವ ಬದಿಗೊತ್ತಿ
ಹೊರಟಿರುವೆವು ಭವಿಷ್ಯದ ಬೆನ್ನತ್ತಿ

ಕನಸು ಕಾಣಲು ಮಿತಿಯೇ ಇಲ್ಲ
ನನಸಾಗದಿದ್ದರೆ ಬೇಗ ಹತಾಷೆಯಾಗುವರೆಲ್ಲ
ಕಷ್ಟವ ಪಡಲು ಯಾರು ತಯಾರಿಲ್ಲ
ಸುಖದ ಬಿಸಿಲ್ಗುದುರೆಯ ಬಯಸುವರೆಲ್ಲ

ಕೆಲವೇ ದಿನದ ಈ ಜೀವನ ಪಯಣ
ಒಳಿತನು ಮಾಡುತ ಬದುಕ ಸವಿಸೋಣ
ಮೋಹ ಮತ್ಸರವ ಬಿಟ್ಟು ಬಿಡೋಣ
 ಭಗವಂತನೆಡೆಗೆ ಮನವ ಹರಿಸೋಣ
           - ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ದಿನಚರಿ
ಬೆಳಿಗ್ಗೆ ಐದು ಗಂಟೆಗೆ ಪ್ರಾರಂಭ ದಿನಚರಿ
ಮಕ್ಕಳನು ಶಾಲೆಗೆ ಹೊರಡಿಸುವ ತರಾತುರಿ
ಅಡಿಗೆ ತಿಂಡಿ ಮನೆಗೆಲಸದ ಚಾಕರಿ
ಸಂಜೆಯಾದೊಡನೆ ಮಕ್ಕಳಿಗೆ ಮಾಡಿಕೊಡಬೇಕು ಚುರುಮುರಿ
ರಾತ್ರಿಯಾದೊಡನೆ ಮತ್ತೆ ಶುರುವಾಗುತ್ತದೆ ನಾಳಿನ ತಯಾರಿ
ಇದೇ ಯಾಂತ್ರಿಕ ಬದುಕಿನ ತರಾವರಿ
        -ಚೇತನ ಭಾರ್ಗವ - Made using Quotes Creator App, Post Maker App
0 likes 0 comments

Explore more quotes

Chethana Bhargava
Quote by Chethana Bhargava - ವಿರಕ್ತಿ
ಭೂಮಿಯ ಮೇಲೆ ಶಾಶ್ವತವಲ್ಲ ಈ ದೇಹ
ಮತ್ತೇಕೆ ನಾನು ನನ್ನದೆಂಬ ವ್ಯಾಮೋಹ
ಮನದಲಿ ತಣಿಯಲಿ ಅಂತರಂಗದ ದಾಹ
ಬಿಡಬೇಕು ಲೌಕಿಕ ವಸ್ತುಗಳ ಮೋಹ

ಪರಿಶುದ್ಧವಾಗಿರಲಿ ದೇವರಲ್ಲಿ ಭಕ್ತಿ
ಕಷ್ಟವ ಎದುರಿಸಲು ನೀಡುವನು ಶಕ್ತಿ
ಪ್ರೀತಿಯು ಹೆಚ್ಚಿಸುವುದು ಜೀವನದ ಆಸಕ್ತಿ
ಬಾಳಿನಲ್ಲಿರಬೇಕು ಸಾಮಾನ್ಯ ಅರಿವಿನ ಭುಕ್ತಿ

ಭಕ್ತಿಮಾರ್ಗದಿ ನಡೆದರೆ ಸಿಗುವುದು ಮುಕ್ತಿ
ಮನುಜನಲ್ಲಿ ಹೆಚ್ಚಾಗುತ್ತಿದೆ ಕುಯುಕ್ತಿ
ಅನುಭವದ ಜ್ಞಾನವೇ ನೀಡುವುದು ನಿಜವಾದ ವಿರಕ್ತಿ
ಕೆಲಸ ಕಾರ್ಯದಲ್ಲಿರಲಿ ಅನವರತ ಅನುರಕ್ತಿ
-ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ದೃಷ್ಟಿ
ಹೃದಯದ ಭಾವನೆ, ಮನದ ಮಾತುಗಳು
ಅರಿಯುವುದು ಪ್ರೀತಿ ತುಂಬಿದ ಕಂಗಳು

ಮನಕೆ ಹತ್ತಿರವಾದವರು ಎಲ್ಲೋ ನೊಂದರೆ
ನಮ್ಮ ಕಣ್ಣಂಚಲಿ ಸುರಿಯುವುದು ಕಣ್ಣೀರಧಾರೆ

ನೋವು ನಲಿವು ಸುಖ ಕಷ್ಟಗಳು
ಶಬ್ದವಿಲ್ಲದ ಭಾಷೆಯಲ್ಲಿ ಹೇಳಬಲ್ಲವು ನಯನಗಳು

ಭೂಮಿಯ ಮೇಲೆ ಶಾಶ್ವತವಲ್ಲ ದೇಹ
ಬಿಡೋಣ ನಾನು ನನ್ನದೆಂಬ ಮೋಹ

ನಮ್ಮ ಕಣ್ಣನ್ನು ದಾನ ಮಾಡೋಣ
ಅಂಧರ ಬಾಳಿಗೆ ಬೆಳಕನ್ನು ತುಂಬೋಣ

ಶ್ರೇಷ್ಟವಾದ ದಾನಗಳಲ್ಲಿ ನೇತ್ರದಾನ ಮುಖ್ಯ
ಇದರಿಂದ ಇನ್ನೊಬ್ಬರ ಜೀವನವು ಸೌಖ್ಯ

ವಿಶ್ವ ದೃಷ್ಟಿ ದಿನವ ಆಚರಿಸೋಣ
ಜನರಲ್ಲಿ ನೇತ್ರದಾನದ ಜಾಗೃತಿ ಮೂಡಿಸೋಣ
-ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ಮುನಿಸು
ನನ್ನವಳ ಹುಸಿಮುನಿಸು 
ನೋಡಲು ಎಷ್ಟೊಂದು ಸೊಗಸು 

ತವರಿಗೆ ಹೋಗುವೆ ಎಂದು ಬೆದರಿಸುವಳು 
ಕೋಪದಿ ಅಲ್ಲೇ ಇರುವೆ ಎನ್ನುವಳು 

ದಿನ ಕಳೆದರೂ ನನ್ನೊಡನೆ ಮಾತಿಲ್ಲ 
ಒಮ್ಮೆಯೂ ನನ್ನೆಡೆಗೆ ತಿರುಗಿ ನೋಡಿಲ್ಲ 

ಈ ಬಾರಿ ನನ್ನ ಮನ್ನಿಸು 
ತಾಳಲಾರೆ ನಿನ್ನ ಈ ಮುನಿಸು
 
ಎನ್ನಲು ಮುನಿಸು ತೊರೆದು ಬಂದಳು ಮೆಲ್ಲಗೆ 
ಮುಡಿಸಿ ಬಿಟ್ಟೆನು ನಾ ತಂದ  ಮಲ್ಲಿಗೆ 
~ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - 

 ನಮ್ಮಲಕ್ಷ್ಮಿ
ಮಂದಹಾಸದಿ ಕೂಡಿದೆ ನಮ್ಮ ಲಕ್ಷ್ಮಿಯ ವದನ
ಮೌನದಿ ಸೆಳೆಯುವುದು ಅವಳ ಮೋಹಕ ನಯನ
ಲಂಗದಾವಣಿ ಹೂಮುಡಿದು ಹರಡಿಹಳು ಸಂಸ್ಕೃತಿಯ ಸಿಂಚನ 
ಸಂಸ್ಕೃತಿಯ ಜೊತೆಯಿರೆ ಪಾವನವು ನಮ್ಮ ಜೀವನ 

       - ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ಉಚಿತ

ಹುಟ್ಟು ಉಚಿತ
 ಸಾವು ನಿಶ್ಚಿತ
ಮಾತಿರಲಿ ಮಿತ
ನಗುವಿರಲಿ ಅಮಿತ

ಶಾಂತಿ ಸಮಾಧಾನ ತರುವುದು ಹಿತ
ಕೋಪ ದುರಾಸೆ ತರುವುದು ಅಹಿತ
ಬಾಳಲ್ಲಿ ಯಾವುದು ಇಲ್ಲ ಶಾಶ್ವತ
ಭಗವಂತನ ನಂಬಿದರೆ ಮುಕ್ತಿ ಖಚಿತ
   -ಚೇತನ ಭಾರ್ಗವ - Made using Quotes Creator App, Post Maker App
1 likes 0 comments
Chethana Bhargava
Quote by Chethana Bhargava - ಗಜಲ್(ಮೊದಲ ಪ್ರಯತ್ನ)
ಶೀರ್ಷಿಕೆ : ಕಂಬನಿ ಮೊಳಗಿರಲು  ಮನಕೆ ಮುದವಿಲ್ಲ ಸಾಕಿ 

ಹೃದಯದ ಅರಮನೆಯ ಬಾಗಿಲನ್ನು ತೆರೆಯುವೆ 
ಆದರೆ ಹೃದಯದ ಬಾಗಿಲಿನ ಕೀಲಿಕೈ ನೀನಾಗಿರುವೆ ಸಾಕಿ 

ಜೊತೆಗಿರು ಪ್ರಿಯತಮೆ ನಿನ್ನಾಸೆಯ ಪೂರೈಸುವೆ 
ನಿನ್ನ ಸನಿಹ ಸಿಗದಿರೆ ಪೂರೈಸದ ಆಸೆಯೇ ನೀನಾಗುವೆ ಸಾಕಿ 

ನಿನ್ನ ವದನದ  ಪ್ರತಿಬಿಂಬ ಅಚ್ಚೋತ್ತಿದೆ ಕಣ್ಣಂಚಲಿ
ಆ ಬಿಂಬ ಸಾವಿರವಾಗಿದೆ ಹರಡಿದ ಕಣ್ಣೀರ ಹನಿಯಲಿ ಸಾಕಿ 

ನೀನು ಬಳಿಯಿರದೆ ಬೆಳದಿಂಗಳು ಸುಡುವ ಬಿಸಿಲು 
ಜೊತೆಗೆ ಕಾಡುವ ನೆನಪು ಎರಗುವ ಬರ ಸಿಡಿಲು ಸಾಕಿ 

ಕಂಬನಿ ಮೊಳಗಿರಲು  ಮನಕೆ ಮುದವಿಲ್ಲ ಸಾಕಿ 
ಚೇತನವಾಗಿ ಬಾ ನೀನು ಉಳಿಸಬೇಡ ಪ್ರೀತಿಯ ಬಾಕಿ 

~ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ತಾಯಿಯ ಗರ್ಭಗುಡಿ
ಅಮ್ಮ ಏಕೆ ಇವತ್ತು ಇಷ್ಟು ಅಳುತ್ತಿದ್ದಾಳೆ . ಅವಳು ಊಟವನ್ನೂ ಮಾಡಿಲ್ಲ ,ನನಗೆ ಹಸಿವಾಗುತ್ತಿದೆ.ನನಗೆ ಈಗ ಐದು ತಿಂಗಳು ತುಂಬುತ್ತಿದೆ. ಹಾಗಾಗಿ ನಾಳೆ ಪರೀಕ್ಷಿಸಲು ವೈದ್ಯರ ಹತ್ತಿರ ಹೋಗುತ್ತಿದ್ದಾಳೆ. ಭಯವಾಗುತ್ತಿರಬೇಕು. ಆದರೆ ಏಕೋ ಅಜ್ಜಿ ಅಪ್ಪನವರ ಜೋರು ಸ್ವರ ಕೇಳುತ್ತಿದೆ. ಹೆಣ್ಣು ಮಗುವಾದರೆ ತೆಗಿಸಿ ಬಿಡೋಣ ಅಂದ ಹಾಗಿತ್ತಲ್ಲ. ಅದಕ್ಕೆ ಇರಬೇಕು ಅಮ್ಮ ಭಯಗೊಂಡು ಅಳುತ್ತಿದ್ದದ್ದು. ಊಟ ಮಾಡಿಲ್ಲ ,  ಹಸಿವು ಸಂಕಟ ನನಗೆ. ಅಮ್ಮನ ದುಃಖ ಅವಳಿಗೆ. 
ಅಂತೂ ಅಮ್ಮ ವೈದ್ಯರ ಹತ್ತಿರ ಸ್ಕಾನಿಂಗ್ ಮಾಡಿಸಿ ಸೂಕ್ಷ್ಮವಾಗಿ ಮೆಲುದನಿಯಲ್ಲಿ ಮನೆಯಲ್ಲಿ ನಡೆದ ಘಟನೆ ಅರುಹಿದ್ದಾಳೆ. ಜಾಣೆ ಅಮ್ಮ, ನನ್ನ ಮೇಲೆ ಎಷ್ಟೊಂದು ಪ್ರೀತಿ. ವೈದ್ಯರೂ ಚಾಣಾಕ್ಷರು. ಅಪ್ಪನ ಹತ್ತಿರ ನಿಧಾನವಾಗಿ ಹಾಗೆ ಲಿಂಗ  ತಾರತಮ್ಯದ ವಿರುದ್ಧ ಆಕ್ಷೇಪ ಎತ್ತಿದ್ದಾರೆ. ಗಂಡು ಮಗುವೇ ಬೇಕು ಎಂಬ ಭಾವನೆ ಹೋಗಲಾಡಿಸಿ ಬರುವ ಮಗುವಿಗೆ ಉತ್ತಮ ತಂದೆಯಾಗಿ ಎಂದು ದೃಢಸ್ವರದಲ್ಲಿ ಹೇಳಿದ್ದಾರೆ. ಅಪ್ಪನಿಗೂ ಅರಿವಾಗಿರಬೇಕು. ಆಯಿತೆಂದು ತಲೆಯಾಡಿಸಿದ್ದಾರೆ. 
ಅಂತೂ 4 ತಿಂಗಳು ಕಳೆದಿದ್ದೇ ಗೊತ್ತಾಗಲಿಲ್ಲ. ಅಮ್ಮನ ಗರ್ಭದಲ್ಲಿ ಬೆಚ್ಚಗಿದ್ದ ನಾನು ಹೊರಗೆ ಬಂದು ಪಿಲಿ ಪಿಲಿ ಕಣ್ಣು ಬಿಡುತ್ತಾ ನೋಡುತ್ತಿದ್ದರೆ ಬಟ್ಟೆಯಲ್ಲಿ ಸುತ್ತಿ ಎತ್ತಿಕೊಂಡ ಅಪ್ಪ ಹೂ ಮುತ್ತನಿತ್ತಿದ್ದಾರೆ. ಮನೆಗೆ ಲಕ್ಷ್ಮಿ ಬಂದಲೆಂದು ಅಜ್ಜಿ ದೃಷ್ಟಿ ತೆಗೆದು ಆಸ್ಪತ್ರೆಯವರಿಗೆಲ್ಲಾ ಸಿಹಿ ಹಂಚಲು ತಯಾರಾಗುತ್ತಿದ್ದಾರೆ. ಇದನ್ನು ನೋಡಿ ನಾನು ಮುಗುಳ್ನಕ್ಕೆ. ಮಗು ನಕ್ಕಿತು ಎಂಬ ಉತ್ಸಾಹ ಅವರಿಗೆ. ಅಮ್ಮನಿಗೆ ಮಾತ್ರ ಆಯಾಸದಲ್ಲೂ ನನ್ನ ನಗುವಿಗೆ ನಿಜವಾದ ಅರ್ಥ ಕಂಡಿರಬೇಕು.....:
~ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ಅಂಬರ
ನೀಲ ಹೊದಿಕೆಯ ಹೊದ್ದಿಹನು ಅಂಬರ
ನಿನ್ನ ಸನಿಹದಿ ಮೂಡುವನು ನೇಸರ
ಸೂರ್ಯ ಚಂದ್ರ ನಕ್ಷತ್ರಗಳೇ ನಿನಗೆ ಆಭರಣ
ನಯನ ಮನೋಹರ ಮೋಡಗಳ ಪಯಣ

ಅಂಬರವ ಬೆಳಗುತಿಹನು ರವಿ
ಬರದಿ ಬರಡಾಗುತಿದೆ ಭುವಿ
ಮೋಡ ಕರಗಿ ಸುರಿದರೆ ಮಳೆ
ರೈತರ ಮೊಗದಿ ಹರುಷದ ಹೊಳೆ

ಬಾನಿಗೂ ಭೂಮಿಗೂ ಎಂತಹ ಸಂಬಂಧ
ಒಂದಕ್ಕೊಂದು ಪೂರಕ ಅನುಬಂಧ
ಸಾಗರದ ನೀರು ಆವಿಯಾಗಿ
ಸುರಿಯುವುದು ಮೇಘ ವರ್ಷವಾಗಿ
              -ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ಹೊಸಬೆಳಕು

ಭರವಸೆಯೇ ಬಾಳಿನ ಹೊಳಸಬೆಳಕು 
ಪ್ರೀತಿವಿಶ್ವಾಸವೇ  ನಿಜಬದುಕು 
ನಗುವನು ಚೆಲ್ಲುತ ದುಃಖವ ಮರೆಸಿ 
ಪ್ರತಿಷ್ಠೆ ಅಹಂಕಾರವ ಬದಿಗಿರಿಸಿ 

ಸರಿಯುವುದು ಕಾಲ ಜೀವನ ಕ್ಷಣಿಕ 
ಸಮರಸದಿ ಬಾಳಿದರೆ ಜೀವನ ಸಾರ್ಥಕ
       -ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ರಾಯರಿದ್ದಾರೆ
ಹೇಗೆಂದು ಬಣ್ಣಿಸಲಿ ಶ್ರೀರಾಘವೇಂದ್ರರ ಮಹಿಮೆಯ
ಭಕ್ತರ  ಕಷ್ಟಗಳ ಬಗೆಹರಿಸುವ ಹಿರಿಮೆಯ
ನಂಬಿ ಬಂದವರ ಕೈ ಹಿಡಿಯುವರು
ಮಂತ್ರಾಕ್ಷತೆ ಕೊಟ್ಟು ಇಷ್ಟಗಳ ಈಡೇರಿಸುವರು

ಕಲಿಯುಗದ ಕಲ್ಪತರು ಕಾಮಧೇನುವಿನ
ಪ್ರತಿರೂಪ
ರಾಯರ ಭಜಿಸಿದರೆ ಕರಗುವುದು ಪಾಪ 
ತುಂಗಾ ತೀರದ ಮಂತ್ರಾಲಯದಲ್ಲಿ ನೆಲಸಿಹರು
ಚಂದದ ವೃಂದಾವನದಿ ಐಕ್ಯರಾಗಿ ಪೊರೆದಿಹರು
         ~ಚೇತನ ಭಾರ್ಗವ - Made using Quotes Creator App, Post Maker App
0 likes 0 comments

Explore more quotes

Chethana Bhargava
Quote by Chethana Bhargava - ಶಿಕ್ಷಕರು
ಮುದ್ದು ಮಾಡುತಾ ಬುದ್ಧಿ ಹೇಳುತಾ
ತಪ್ಪು ತಿದ್ದುವರು ಶಿಕ್ಷಕರು
ನಡೆ ನುಡಿ ಕಲಿಸುತಾ
ಬಾಳ ಬೆಳಗುವ ಮಾರ್ಗದರ್ಶಕರು

ಪಾಠದಲ್ಲೇ ನೀತಿ ಹೇಳುವರು 
ನಮ್ಮ ವ್ಯಕ್ತಿತ್ವ ಬೆಳಗಿಹರು 
ಕೈ ಹಿಡಿದು  ಜ್ಞಾನ ಧಾರೆಯ ಹರಿಸಿಹರು
ತಂದೆ ತಾಯಿಗಿಂತ ಮಿಗಿಲಿವರು

ಗುರುವಾಗಿ ನಮ್ಮ ಸಲಹಿಹರು
ಅಕ್ಷರದಾಸೋಹ ಮಾಡಿಹರು 
ತಾಯಿ ಶಾರದೆಯನ್ನು ಭಜಿಸುತಾ ಜ್ಞಾನ ದೀವಿಗೆ ಬೆಳಗುವರು.
             - ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - 
ಬಸ್ಸೋಕುಸೆಕಿಕಾ
ಶೀರ್ಷಿಕೆ: ರಕ್ಷಾಬಂಧನ

೧. ಅಣ್ಣ ತಂಗಿಯ 
     ಸುಮಧುರ ಬಂಧನ 
     ಸೋದರಿಯರ
     ಹಬ್ಬ ರಕ್ಷಾಬಂಧನ 
     ಸಂತಸ ಎಲ್ಲರಿಗೂ 
     ಸಂಭ್ರಮ ಎಲ್ಲೆಡೆಗೂ 

೨. ರಕ್ತವ ಹಂಚಿ 
     ಜತೆ ಹುಟ್ಟಿರುವಳು 
     ತಾಯಿ ಮಮತೆ 
     ತೋರುತಿರುವವಳು 
     ಮಧುರವು ಈ ಬಂಧ 
     ರಕ್ಷಣೆಗೆಂದೂ ಸಿದ್ಧ 

೩. ಕಟ್ಟುತ ರಾಖಿ 
     ಉಡುಗೊರೆಯು ಬಾಕಿ 
     ನೀಡು ಕಾಣಿಕೆ 
     ಬೀಳದು ತಪರಾಖಿ 
     ಪ್ರೀತಿಯಿರಲಿ ಎಂದು 
     ಸೋದರ ನಿಜಬಂಧು
                   - ಚೇತನ ಭಾರ್ಗವ
                       - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ಸವಿಯಾದ ನೋಟ 
ಹಕ್ಕಿಯಾದರೇನು ನನಗಿಲ್ಲವೇ ಸೌಂದರ್ಯ ಪ್ರಜ್ಞೆ
ಪುಟ್ಟಜೀವಿ ಎಂದು ಮಾಡದಿರಿ ಅವಜ್ಞೆ
ಶುದ್ಧವಿದ್ದರೆ ಮನಸು ಕಾಣುವುದು ಸವಿಯಾದ ನೋಟ
ಬೆರಗಾಗಿ ನೋಡುವಿರಿ ಈ ಪುಟ್ಟಹಕ್ಕಿಯ ಆಟ

ಎಲ್ಲರಿಗೂ ಕನ್ನಡಿಯಲಿ ಇಣುಕುವ ಆಸೆ ಸಹಜ
ವಿಶ್ವವೆಲ್ಲವೂ ಸುಂದರ ಇದನು ಅರಿತುಕೊ ಮನುಜ
ಕನ್ನಡಿಯಲಿ ಕಾಣುವುದು ಬರಿಯ ಪ್ರತಿಬಿಂಬ
ಸಿಹಿ ನೋಟವ ನೋಡಿ ಆಗದಿರು ಹುಂಬ

ಸತ್ಯದರುಶನಕೆ ಬಿಡಬೇಕು ನಮ್ಮ ಒಣಜಂಭ
ಇದನ್ನು  ಅರಿಯಲು ಪಡಬೇಕು ಪರಿಶ್ರಮ ತುಂಬ
           - ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - 
ನ್ಯಾನೋ ಕಥೆ
ಶೀರ್ಷಿಕೆ: ಆತ್ಮಸಾಕ್ಷಿ
ಮನೆಕೆಲಸ ಮಾಡಿಕೊಂಡಿದ್ದ ಅನಾಥ ಹುಡುಗಿಗೆ ಕಥೆ ಕವನ ಬರೆಯುವ ಹವ್ಯಾಸವಿತ್ತು. ಇದನ್ನು ಗಮನಿಸಿದ ಮನೆಯ ಒಡತಿ  ಹೆದರಿಸಿ ಅವಳು ಬರೆದ ಬರಹಗಳನ್ನು ತನ್ನ ಮಗಳ ಬರಹವೆಂದು ಬಿಂಬಿಸುತ್ತಿದ್ದಳು.ಪ್ರತಿಷ್ಠಿತ ಪತ್ರಿಕೆಗಳಲ್ಲಿ ಒಡತಿಯ ಮಗಳ ಹೆಸರಿನಲ್ಲಿ  ಬರಹಗಳು ಪ್ರಕಟವಾಗಿ  ಜನಪ್ರಿಯವಾಯಿತು. ತನ್ನ ತಾಯಿ ಈ ರೀತಿ ಮಾಡುವುದು ಅವಳಿಗೆ ಸ್ವಲ್ಪವೂ ಇಸ್ಟವಿರಲಿಲ್ಲ.ತನ್ನದಲ್ಲದ ಕೀರ್ತಿ,ಹೊಗಳಿಕೆ ನನಗೆ ಬೇಡವೆಂದು ವಾದಿಸುತ್ತಿದ್ದಳು.ಒಂದು ಸಂಸ್ಥೆಯು ಇವಳ ಜನಪ್ರಿಯತೆಯನ್ನು ಗುರುತಿಸಿ "ಉತ್ತಮ ಬರಹಗಾರ್ತಿ" ಎಂಬ ಬಿರುದು ನೀಡಬೇಕೆಂದು ತೀರ್ಮಾನಿಸಿ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದರು. ಆಕೆಗೆ ಆ ಸನ್ಮಾನವನ್ನು ಸ್ವೀಕರಿಸಲು ಅವಳ "ಆತ್ಮಸಾಕ್ಷಿ" ಒಪ್ಪಲಿಲ್ಲ.ನಿಜವಾದ ಬರಹಗಾರ್ತಿಯನ್ನು ಜನರಿಗೆ ಪರಿಚಯಿಸಿ ಅವಳಿಗೆ ಸಿಗಬೇಕಾದ ಗೌರವವನ್ನು ಸಿಗುವ ಹಾಗೆ ಮಾಡಿ,ಕಲೆಗೆ ಸಾವಿಲ್ಲವೆಂದು ನಿರೂಪಿಸಿದಳು.
        -ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ದುಂಬಿ
ಮೊಗ್ಗು ಅರಳಿ ಹೂವಾದರೆ ಚೆಂದ
ದುಂಬಿಯು ಹೀರುವುದು ಮಕರಂದ
ಝೇಂಕಾರ ನಾದವ ಕೇಳಲು ಇಂಪು
ಎಲ್ಲೆಡೆಯೂ ಪಸರಿಸುವುದು ಅದರ ಕಂಪು

ದುಂಬಿಯ ಬಯಸುವುದು ಹೂವಿನ ಸಂಗ
ಪರಾಗಸ್ಪರ್ಶವು ಪ್ರಕೃತಿಯ ಅಂಗ
ಮಧುವನು ಹೀರುವುದು ದುಂಬಿಯ ಕೆಲಸ
ಅದುವೇ ಸೃಷ್ಟಿಯಲ್ಲಿನ ಸಮರಸ

ಹೂವಿನ ಅಂದ ಹೆಚ್ಚಾಗುವುದು ದುಂಬಿಯಿಂದ
ಈ ಸೊಬಗ ನೋಡಲು ಸಿಗುವುದು ಪ್ರಕೃತಿಯಿಂದ
        - ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ಸೆಡೋಕಾ ರಚನೆ
ಶೀರ್ಷಿಕೆ: ವರಮಹಾಲಕ್ಷ್ಮಿ

1.ನಮಿಸುವೆವು 
ವರ ಮಹಾಲಕ್ಷ್ಮಿಗೆ 
ಬೇಡಿದ ವರನೀವ 
ಸಿರಿ ದೇವಿಗೆ 
ಸೇವೆ ಸ್ವೀಕರಿಸುತ
ಕೃಪೆತೋರಿ ಸಲಹು 

2.ಹರಿಯ ಕಾಂತೆ 
ಕರದಿ ಕಮಲವ 
ಪಿಡಿದು ಪೊರೆಯುವ 
ಶರಣಾಗತ 
ವತ್ಸಲೆ ಧನಧಾನ್ಯ 
ಸಮೃದ್ಧಿಯ ನೀಡುತ

3.ವನಿಗ್ಜನರ 
ಅಧಿದೇವತೆ ಹರಿ 
ಚರಣ ಸಾಯುಜ್ಯವ
ನೀಡಿ ಸಲಹು 
ಶಿವನ ಸಹೋದರಿ 
ಹರಿ ಹೃದಯಸ್ಥಿತೇ 

4.ನಿನ್ನ ಕೃಪೆಯು 
ನಮ್ಮ ಜೊತೆಗಿರಲು 
ಬಾಳು ಸಂಪನ್ನವೆಂದೂ 
ಶ್ರೀ ಲಕುಮಿಯೇ 
ನಿನ್ನ ನಾಮಸ್ಮರಣೆ 
ಜೊತೆಗಿರಲಿ ಎಂದೂ

~ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ತರಂಗ
ಮನಸ್ಸಿನಲ್ಲಿ ಮೂಡುವುದು ಭಾವನೆಗಳ ತರಂಗ
ನೋವುಗಳನ್ನು ಮರೆಸುವುದು ಹಾಸ್ಯಪ್ರಸಂಗ
ಕರ್ಣಾನಂದವಾಗುವುದು ಬಾರಿಸಿದರೆ ಮೃದಂಗ
ಸಂಬಂಧಗಳ ಬಂಧನದಿ ಸಿಲುಕಿದೆ ನನ್ನಂತರಂಗ

ರಂಗು ರಂಗಿನ ಕನಸು ಅಂತರಂಗದಿ ಮೂಡಿರಲು
ಭಾವನೆಗಳನು ಹೊರಹಾಕಲು ಚಡಪಡಿಸುತಿರಲು
ಕನಸು ನನಸಾಗಿ ಬಾಳು ಹಸನಾಗಿದೆ
ಮನದ ಭಾರವೆಲ್ಲ ಇಳಿದಂತೆ ಭಾಸವಾಗಿದೆ

ದುಂಬಿಗಳು ಹೀರುವುದು ಮಕರಂದ
ಮಧುರ ಭಾವಗಳ ತರಂಗದಿಂದ ಸಿಗುವುದು ಮನಕೆ ಆನಂದ
ರೇಡಿಯೋ ತರಂಗಗಳ ಅಧ್ಯಯನದಿಂದ ಹೆಚ್ಚುವುದು ಜ್ಞಾನ
ವಿಜ್ಞಾನವು ಮುಂದುವರಿದು ಬೆಳೆಯಲಿ ಹೊಸ ತಂತ್ರಜ್ಞಾನ
           - ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ಸಮಾನತೆ

ಹೆಣ್ಣು ಸೌಂದರ್ಯದ ಗಣಿ, ಮಮತೆ, ಪ್ರೀತಿ, ವಾತ್ಸಲ್ಯ, ಸ್ವಾಭಿಮಾನದ ಪ್ರತಿರೂಪಿಣಿ,ಛಲಗಾತಿ, ಸಹನಾಮೂರ್ತಿ, ಕರುಣಾಮಯಿ, ಬದುಕಿನ ಜಂಜಾಟದ ಜೊತೆಗೆ ಯುದ್ಧಮಾಡುವಂತಹ ಹೋರಾಟಗಾರ್ತಿ, ಕಲ್ಲನ್ನು ಶಿಲೆಯಾಗಿ ಮಾರ್ಪಡಿಸುವಂತಹ ಶಕ್ತಿ ಇರುವವಳು ಆದರೂ ಪುರುಷ ಪ್ರಧಾನ ಸಮಾಜದಲ್ಲಿ  ಗಂಡಿಗೆ ಸಿಗುವಷ್ಟು  ಸ್ಥಾನಮಾನ ಸಮಾನವಾಗಿ ಹೆಣ್ಣಿಗೆ ಸಿಗುತ್ತಿಲ್ಲ . ಹೆಣ್ಣು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಿದ್ದರೆ ಅವಳಿಗೆ ಅನೇಕ ಕಟ್ಟುಪಾಡುಗಳಿವೆ . ಆದರಿಂದ ಆಕೆ ಗಂಡಿಗಿಂತ ಹೆಚ್ಚು ಶ್ರಮ ಹಾಕಬೇಕಾಗುತ್ತದೆ .

ಆದರೆ ಕಾಲ ಬದಲಾಗುತ್ತಿದೆ  . ಹೆಣ್ಣು ಅಡುಗೆ ಮನೆಯನ್ನೂ ನಿಭಾಯಿಸುತ್ತಾ ಬಾಹ್ಯಾಕಾಶ ಕ್ಷೇತ್ರದಲ್ಲೂ ದಾಪುಗಾಲು ಹಾಕಿದ್ದಾಳೆ. ಮನೆಯಲ್ಲಿ ಗಂಡ ಮಕ್ಕಳನ್ನು ನಿಭಾಯಿಸುವುದರ ಜೊತೆಗೆ ಚಂದ್ರಯಾನದಂತಹ ಗುರುತರ ಜವಾಬ್ದಾರಿಯುತ ಕೆಲಸಗಳನ್ನೂ ನಿಭಾಯಿಸಿ ಸೈ ಎಣಿಸಿಕೊಳ್ಳುತ್ತಿದ್ದಾಳೆ . ಪುರುಷರ ಜೊತೆಗೆ ಸಮಾನತೆಯ ವಿಷಯ ದಾಟಿ ಒಂದು ಹೆಜ್ಜೆ ಮುಂದೆಯೇ ಹೋಗಿದ್ದಾಳೆ .

~ ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ಕಾಡುವ ಕನಸು
ಕನಸೊಂದು ಕಾಡುತಿದೆ
ಮನಸು ಹಾರಾಡುತಿದೆ 
ಕನ್ನಡಿಯ ಭಾವ ಬಿಂಬದಲಿ 
ಕಂಡೆ ನಾ ನಿನ್ನ ಛಾಯೆ ಹರುಷದಲಿ 

ಕಣ್ಣು ಮುಚ್ಚಿದ ರೆಪ್ಪೆಯ ಅಡಿಯಲ್ಲೂ
ಕತ್ತಲೆಯ ಮಬ್ಬು ಬೆಳಕಿನಲ್ಲೂ 
ಕಾಣುತಿಹುದು ನಿನ್ನ ಚೆಲುವಾದ ಮೊಗವು 
ಕನಸಲೇ ಮರೆಯಾಗದಿರಲಿ ನಿನ್ನ ನಗುವು 

ಹಗಲಿರುಳು ಕಾಡುತಿದೆ ನಿನ್ನಯ ನೆನಪು 
ನೀನಿಲ್ಲದಿರೆ ಈ ಜೀವನ ಕಪ್ಪು ಬಿಳುಪು 
ನಿನ್ನ ರೂಪವೇ ನನ್ನ ಮೊಗದಲಿ ತರುವುದು ಹೊಳಪು 
ಕಾಡುವ ಕನಸು ನನಸಾದರೆ ಈ ಜೀವ ನಿನಗೆ ಮುಡಿಪು 

~ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ಅನರ್ಘ್ಯ 
ಮಗುವಿನ ನಗೆಯು ಮೋಹಕ 
ಸೆಳೆವುದು ಚಿತ್ತವ ಚುಂಬಕ 
ಮಕ್ಕಳು ಎಂದಿಗೂ ಅನರ್ಘ್ಯ ರತ್ನ 
ಅವರ ಏಳಿಗೆಗೆ ಮಾಡೋಣ ಪ್ರಯತ್ನ 

ನೀಡುತಾ ಬೆಳೆಸಿರೆ ಸಂಸ್ಕಾರ
ಸಮಾಜಕೆ ಅದುವೇ ಸತ್ಕಾರ 
ಮಕ್ಕಳಲಿ ಮೂಡದಿರಲಿ ತಾತ್ಸಾರ 
ಮಕ್ಕಳೇ ಬೆಳಗುವುರು ಸಂಸಾರ 

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು 
ಮೂಡಲಿ ಎಲ್ಲೆಡೆ ಅವರ ಯಶಸ್ಸಿನ ಹೆಜ್ಜೆಗಳು 

~ಚೇತನ ಭಾರ್ಗವ - Made using Quotes Creator App, Post Maker App
0 likes 0 comments

Explore more quotes

Chethana Bhargava
Quote by Chethana Bhargava - ಲೆಮೆರಿಕ್ ಕಿರುಗವನ 
ಶೀರ್ಷಿಕೆ:ಸೈನಿಕ 

ರಾತ್ರಿ ಹಗಲೆನ್ನದೆ ಕಾಯುವರು ದೇಶ
ಯುದ್ಧಕೆ ನಿಂತರೆ ಹುಲಿಯ ಆವೇಶ 
ಪ್ರಾಣವ ಪಣವಾಗಿಸಿ ಕಾದಿಹರು
 ಶತ್ರುವ ಎಂದಿಗೂ ಬಿಡರಿವರು 
ಸೈನಿಕರಿಂದಲೇ ದೇಶ ಆಗುವುದು ಪ್ರಕಾಶ

ಶೀರ್ಷಿಕೆ: ಭಾರತ 

ನಮ್ಮ ದೇಶ ಭವ್ಯ ಭಾರತ 
ಭಾವ ರಾಗ ತಾಳದ ಮಿಳಿತ 
ನಮ್ಮ ಅಸ್ತಿತ್ವದ ಗುರುತು
ಉಳಿವಿಲ್ಲ ಇದ ಹೊರತು 
ಇರಲಿ ನಮ್ಮಲಿ ದೇಶಭಕ್ತಿಯ ಸೆಳೆತ

       ~ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ವಿಜಯ
ಬದುಕಿನಲ್ಲಿ ಏರಿಳಿತ ಸಹಜ 
ಅರಿತು ನಡೆ ಇದನು ಓ ಮನುಜ
ಬಿಡು ನೀನು ಅಡಿಗಡಿಗೆ ಸೋಲಿನ ಭಯ 
ಸಾರ್ಥಕತೆಯ ಬದುಕೇ ನಿಜವಾದ ವಿಜಯ

ಸತ್ಯದಿ ನಡೆಯುವ ಬಾಳಿನ ಹಾದಿನ 
ಏರುವೆ ನೀನು ಯಶಸ್ಸಿನ ಗಾದಿಯ 
ನೋವು ನಿರಾಶೆ ಕ್ಷಣಿಕವು ಇಲ್ಲಿ 
ವಿಜಯವು ಖಚಿತ ಸಾಧನೆಯಲ್ಲಿ 
~ ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ನೆರಳು
ಎಲ್ಲಿ ಹೋದರೂ ಬರುವೆ
ನನ್ನನೇ ಹಿಂಬಾಲಿಸುವೆ
ಒಂಟಿತನವ ನೀಗಿಸುವೆ
ಸಂಗಾತಿಯಂತೆ ಜೊತೆಗಿರುವೆ

ಬೆಳಕು ಚೆಲ್ಲಿದಾಗ ಮರೆಯಾಗುವೆ
ಯಾರು ಇದ್ದರು ಇಲ್ಲವಾದರೂ ನೀನಿರುವೆ
ಎಲ್ಲರಿಗೂ ತಿಳಿದಿದೆ ನೆರಳು ನಮ್ಮನೆಂದೂ ಬೆಂಬಿಡದು
ಇರುವರೆಗೂ ದೇಹದಿಂದ ದೂರವಾಗದು

ಜೊತೆಗಿರುವ ಬಂಧು ನೆರಳು
ಅಂದು ಇಂದು ಮುಂದು ಹಗಲಿರುಳು

ದಣಿದವರಿಗೆ ನೆರಳ ನೀಡುವುದು ಗಿಡಮರಗಳು
ಈಗ ಎಲ್ಲೆಲ್ಲೂ ಕಟ್ಟಡ ಮಹಲುಗಳು

ಮಕ್ಕಳಿಗೆ ನೆರಳಾಗಿ ಕಾಯುವರು ಹೆತ್ತವರು
ಅವರ ಮನವ ಎಂದೂ ನೋಯಿಸದಿರು
            - ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ಚುಟುಕು - ಮಿಟುಕು
ಸ್ನೇಹ

ಸ್ನೇಹವೆಂಬುದು ಸುಂದರ ಸಂಬಂಧ
ಇರಲಿ ಬಾಳಲಿ ಇದರ ಅನುಬಂಧ
ಇದಕ್ಕೆ ಇಲ್ಲ ಯಾವ ಬಂಧ
ಸ್ನೇಹದ ಹಾರಾಟವೇ ಸ್ವಚ್ಛಂದ

ಸೃಷ್ಟಿ

ಗೆಳೆತಿಯರ ಬಳಗದ ಸೃಷ್ಟಿ
ನಮ್ಮೆಲ್ಲರ ಸ್ನೇಹದ ಸಮಷ್ಟಿ
ಜಾತಿ ಮತದ ಎಲ್ಲೇ ದಾಟಿ
ಹೃದಯದ ಸ್ನೇಹ ತಂತಿಗಳ ಮೀಟಿ
ಮಿತೃತ್ವ ಬಂಧಕ್ಕೆ ನಮಿಸೋಣ ಅನಂತ ಕೋಟಿ
         - ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ಆಟ
ಮಕ್ಕಳ ಆಟ ಚಂದ
ಬಾಲ್ಯದ ನೆನಪೇ ಅಂದ
ಆಡಲು ಬಂದ ಕಂದ
ಕದ್ದು ಮಣ್ಣನು ತಿಂದ

ಹಗಲಿರುಳೆನ್ನದೆ ಆಡುವನು ಆಟ
ಕೆಲಸವ ಹೇಳಿದರೆ ಅಲ್ಲಿಂದ ಓಟ
ಓದಲು ಕುಳಿತರೆ ಶುರುವಾಗುವುದು ಹಠ
ಆಟದ ಜೊತೆಗೆ ಕಲಿಸಬೇಕು ಪಾಠ

ದೈಹಿಕವಾಗಿ ಉತ್ತಮ ಹೊರಾಂಗಣ ಆಟ
ಮನಸ್ಸಿಗೆ ಹಿತ ಗೆಳೆಯರ ಒಡನಾಟ
ಏರ್ಪಡಿಸುವ ಸ್ನೇಹಿತರ ಕೂಟ
ಬಾಲ್ಯವ ನೆನೆಯುತ ಸವಿಯೋಣ ಊಟ
             -ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ನಕಲಿ ಖಾತೆ  .. ಅಸಲಿಯ ವ್ಯಥೆ 
ಇತ್ತೀಚಿಗೆ ಎಲ್ಲೆಲ್ಲೂ ನಕಲಿ ಖಾತೆಗಳ ಹಾವಳಿ ವಿಪರೀತವಾಗಿಬಿಟ್ಟಿದೆ . ಎಲ್ಲ ರಂಗಗಳಲ್ಲೂ  ನಕಲಿಯ ಹಾವಳಿ ಇದ್ದಿದ್ದೇ . ಆದರೆ ಖಾತೆಯ ಧೃಡೀಕರಣ ಬೇಡುವ ಎಲ್ಲಾ ವಿಭಾಗಗಳಲ್ಲೂ ನಕಲಿಯ ಮಸಲತ್ತು ಅಸಲಿಯನ್ನು ಮರೆಸಿ ಬಿಟ್ಟಿದೆ .  ಜಮೀನಿರಲಿ , ಗೃಹ  ನಿವೇಶನ ಮುಂತಾಗಿ ಖಾತಾ ಮಾಡುವ ಎಲ್ಲದರಲ್ಲೂ ನಕಲಿಯೇ ರಾರಾಜಿಸಿ ಜನಸಾಮಾನ್ಯರನ್ನು ಮೋಸಗೈದು ದುಡ್ಡು ವಂಚಿಸುವ ಖದೀಮರ ದೊಡ್ಡ ಜಾಲವೇ ಇದೆ . ಸಾಮಾಜಿಕ ಜಾಲತಾಣಗಳು ಜನಪ್ರಿಯವಾದಮೇಲಂತೂ ನಕಲಿ ಖಾತೆ ಸೃಷ್ಟಿಸಿ ಸುಳ್ಳು ಸುದ್ದಿ ಸೃಷ್ಟಿಸುವ , ವಂಚಿಸುವ , ಸುಳ್ಳು ಹೇಳುತ್ತಾ ನಂಬಿಸಿ ಹೆಣ್ಣು ಮಕ್ಕಳ ಬಾಳನ್ನೇ ಹಾಳು ಮಾಡಿದ ನಕಲಿ ಖಾತೆಯ ಪ್ರಿಯಕರರ ಪಟ್ಟಿಯೇ ದೊಡ್ಡದಿದೆ . ಇದರ ವ್ಯಾಪಕತೆ ಎಷ್ಟಿದೆಯೆಂದರೆ ನಕಲಿ ಯಾವುದೂ ಅಸಲಿ ಯಾವುದೂ ಎಂದು ಗೊತ್ತೇ ಆಗದಷ್ಟು ಬೆಳೆದು ಹೋಗಿದೆ . ಮೊಬೈಲ್ ಕರೆಗಳಿಂದ , ಸಾಮಾಜಿಕ ಜಾಲ ತಾಣಗಳಿಂದ ವಂಚನೆಗೊಳಗಾದವರಲ್ಲಿ ವಿದ್ಯಾವಂತರ ಪಟ್ಟಿಯೇ ದೊಡ್ಡದಿದೆ  ಇನ್ನು ಜನಸಾಮಾನ್ಯರ ಪಾಡೇನು . ಈ ನಕಲಿ ಖಾತೆಯನ್ನು ಹುಡುಕಿ ಎಚ್ಚರಿಸುವ ಪ್ರಕ್ರಿಯೆಯನ್ನು ಬಲಗೊಳಿಸಲು  ದೈತ್ಯ ಕಂಪನಿಗಳಾದ ಗೂಗಲ್ ಫೇಸ್ಬುಕ್ ಅಮೆಜಾನ್ ಮೈಕ್ರೋಸಾಫ್ಟ್ ಹಗಲೂ ರಾತ್ರಿ ಶ್ರಮ ವಹಿಸುತ್ತಿವೆ 

ನಕಲಿಯ ಆಮಿಷಗಳಿಗೆ ನಮ್ಮ ಅಸಲಿತನ ಬಲಿಯಾಗದಿರಲಿ . ಸೈಬರ್ ಅಪರಾಧಗಳ ಬಗ್ಗೆ ಜಾಗೃತರಾಗಿ ಒಳ್ಳೆಯ ನಾಗರೀಕ ಸಮಾಜವನ್ನು ಕಟ್ಟೋಣ 
~ ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ಪ್ರತಿಬಿಂಬ
ನಾವಿರುವಂತೆ ಮೂಡುವುದು ಬಿಂಬ ದರ್ಪಣದಲ್ಲಿ
ನಮ್ಮಲ್ಲಿ ಇರದದ್ದು ಮೂಡುವುದು ಗುರುವಿನ ಅರ್ಪಣೆಯಲ್ಲಿ 
       -ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ಕೂಡು ಕಟುಂಬ 
        ಎಲ್ಲರೂ ಒಟ್ಟಾಗಿ ಕೂಡಿ ಬಾಳುವ ಬಾಳ್ವೆ 
ತರುವುದು ಸಂತೋಷದ ಸಹಬಾಳ್ವೆ 
ಕೂಡು ಕುಟುಂಬದಲ್ಲಿರುವುದು ಹರ್ಷ ಅಪಾರ 
ನೀಡುವರು ಒಬ್ಬರಿಗೊಬ್ಬರು ಸಹಕಾರ 

ಕುಟುಂಬದ ಪಾಯವೇ ಹೊಂದಾಣಿಕೆ 
ಇರಬೇಕು ಪ್ರೀತಿ ವಿಶ್ವಾಸದಲ್ಲಿ ನಂಬಿಕೆ 
ಇದೇ ಸಮಾಜಕ್ಕೆ ನೀಡುವ ಕಾಣಿಕೆ 
ಶಾಂತಿ ನೆಲೆಗೊಳ್ಳಲು ಇದುವೇ ಭೂಮಿಕೆ 

ನಾನು ನನ್ನದೆನ್ನುವ ಮನುಜನ ಸ್ವಾರ್ಥ 
ತರುತಿಹದು ಜಗಕೆ ಬಹಳ ಅನರ್ಥ 
ಕೂಡಿ ಬಾಳುವುದೇ ಸಾಮರಸ್ಯದ ಮೆಟ್ಟಿಲು
ಕೂಡು ಕುಟುಂಬವೇ ಅದರ ತೊಟ್ಟಿಲು
~ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ಕೂಡು ಕುಟುಂಬ
ನಾವಿಬ್ಬರು ನಮಗೊಬ್ಬರೇ ಎಂಬ ಈ ಕಾಲದಲ್ಲಿ ಪೋಷಕರ ಜತೆ ಅಜ್ಜಿ ತಾತ  ಚಿಕ್ಕಪ್ಪ ಚಿಕ್ಕಮ್ಮ ಅಣ್ಣ ಅತ್ತಿಗೆ ತಂಗಿ ಅತ್ತೆ ಮಾವ ಹೀಗೆ ಬಗೆ ಬಗೆಯ ಸಂಬಂಧಗಳ ಪಾತ್ರಗಳೇ ನಿಧಾನವಾಗಿ ಮರೆಯಾಗುತ್ತಿವೆ . ಬದಲಾದ  ಜೀವನ ಶೈಲಿ , ಗಂಡ ಹೆಂಡತಿ ಇಬ್ಬರೂ ದುಡಿಯುವ ಅನಿವಾರ್ಯತೆ , ನಗರೀಕರಣ ಇವೆಲ್ಲವೂ ಕುಟುಂಬದ ಗಾತ್ರವನ್ನು ಕಿರಿದಾಗಿಸಿದೆ . ಕೂಡು ಕುಟುಂಬದಲ್ಲಿದ್ದ ಸಾಮರಸ್ಯ  ಸಂಬಂಧಗಳ ಸ್ವಾರಸ್ಯ ಮಾಯವಾಗಿದೆ . ಅಲ್ಲಿದ್ದ ಹಾಡು ಹರಟೆ  ಒಟ್ಟಿಗೆ ಮಾಡುತ್ತಿದ್ದ ಊಟ, ಕಳೆಯುತ್ತಿದ್ದ ಸಮಯ ಹಬ್ಬ ಹರಿದಿನ ಪೂಜೆ ಪುನಸ್ಕಾರ ನಿಧಾನವಾಗಿ ಮಾಯವಾಗುತ್ತಿದೆ , ಮನುಷ್ಯ ಹಣ ಕೂಡುವುದರಲ್ಲಿ ಮಗ್ನನಾಗಿದ್ದಾನೆ . ಕೂಡು ಕುಟುಂಬದಲ್ಲಿದ್ದ ಅನುಬಂಧ ಕಳೆಯುತ್ತಿದೆ 
~ಚೇತನ ಭಾರ್ಗವ - Made using Quotes Creator App, Post Maker App
0 likes 0 comments
Chethana Bhargava
Quote by Chethana Bhargava - ಹಣೆ ಬರಹಕ್ಕೆ
ಹೊಣೆ ಯಾರು
ಕ್ರೂರ ವಿಧಿ ಲಿಖಿತವನ್ನು 
ತಡೆಯುವರಾರು

ಹುಟ್ಟುವಾಗಲೇ ಬ್ರಹ್ಮ 
ಬರೆದಿರುವನು ಹಣೆಬರಹ
ನಾನು ನನ್ನದೆನ್ನುವುದು
ಇಲ್ಲಿ ಬರಿ ತೋರುಗಾಣಿಕೆಯ ತರಹ 

ಹುಟ್ಟು ಸಾವುಗಳ ನಡುವೆ
ವಿಧಿಯಾಟ ಬಲುಜೋರು
ಕಳೆದುಹೋಗುವದು ಸಮಯ 
ಜಾರಿದಂತೆ ಇಳಿಜಾರು 

ಯಾರೂ ನಮ್ಮವರಲ್ಲ ಪೂರ್ಣ ನಂಬುವುದು ತರವಲ್ಲ 
ಇರುವಷ್ಟು ದಿನ ಪ್ರೀತಿ ಹಂಚುತ ಕಳೆವ ನಾವೆಲ್ಲಾ 

ಸ್ವಾರ್ಥ ದ್ವೇಷ ಅಸೂಯೆ ಇಂದ 
ಕೂಡಿದೆ ಬದುಕು
ನ್ಯಾಯ ನೀತಿ ದೂರಾಗಿ 
ಕಾಣುತಿದೆ ಹಣದ ವ್ಯಾಮೋಹದ ಥಳುಕು 

ಅನ್ಯಾಯದ ಹಾದಿಯಲಿ ನಡೆಯಿರುವುದು ಬಲು ಸುಲಭ 
ಪಾಪ ಕರ್ಮದ ಗಂಟು ಕಳಚುವುದು ದುರ್ಲಭ 

ಕಷ್ಟವೋ ಸುಖವು ಗುರಿ ಧರ್ಮವಾಗಿರಲಿ 
ಅನ್ಯಾಯವ ಎದುರಿಸಲು ಮೈಮನದಲಿ ಕಸುವಿರಲಿ 

ಧರ್ಮ ಉಳಿಸಲು ಕರ್ಮ , ಫಲ ದೇವರಿಗಿಡು ನೀನು 
ಒಳಿತು ಮಾಡುತ ಎಲ್ಲರೊಳಲೊಂದಾಗಿ ತಾನು 

ವಿಧಿ ಬರಹವು ಕಾಡದು ಭಗವಂತನ ಅರಿತರೆ 
ನರಕವಿದೋ ಸಂಸಾರ ಭಗವಂತನ ಮರೆತರೆ 
~ಚೇತನ ಭಾರ್ಗವ 




       - Made using Quotes Creator App, Post Maker App
0 likes 0 comments

Explore more quotes