@ManaEdtz profile
@ManaEdtz
13 5 1
Posts Followers Following
@ManaEdtz
Quote by @ManaEdtz - Love is not between
a handsome boy
a beautiful girl.

Love is between two 
real heart❤️
 - Made using Quotes Creator App, Post Maker App
6 likes 1 comments
@ManaEdtz
Quote by @ManaEdtz - ಭೂರಮೆ ನಲಿದಾಡಿದಳು 
ಇಬ್ಬನಿಯ ನಸು ಬೆಳಕಿನಲಿ..
ಈ ಪ್ರಕೃತಿಯ ಸೊಬಗಿನ ತಾಣದಿ 
ಒಂಚೂರು ವಿಹರಿಸುವ ಬಾ ಸಖಾ|
ಸಹ್ಯಾದ್ರಿಯ ಮಡಿಲಲ್ಲಿ 
ಮಗುವಂತೆ  ನಿದ್ರಿಸುವ.......
ಹರಿಯುವ ಸುಧೆಯ ತೀರದಲ್ಲೊಮ್ಮೆ 
ಒಡಲ ಬೇಗುದಿಯನ್ನು ಹರಿಯ ಬಿಡುವ..
ಪಚ್ಚೆಲೆಗಳ ಮೈ ಮೇಲಿರುವ
ಹನಿಗಳ ಸ್ಪರ್ಶಿಸಿ ಪ್ರೇಮಾನುಭವವ 
ಪಡೆಯುವ ಬಾ ಸಖಾ|
ಪ್ರಕೃತಿ ಮಾತೆ ಎಂಬ ಅದಮ್ಯ 
ಪ್ರೇಮಿಯ ಮುಂದೆ ನಾವು ತೃಣ ಗಾತ್ರದ 
ಹುಲ್ಲೆಂದು ಅರಿತು ನೋವ ಮರೆತು 
ಕ್ಷಣಿಕ ಕಾಯ ನಾವೆಂಬ ಭಾವ
ತಳೆದು ರಸಭಾವದಲಿ ಒಂದಾಗುವ...

 - Made using Quotes Creator App, Post Maker App
6 likes 1 comments
@ManaEdtz
Quote by @ManaEdtz - ಎಲೆ ಮೇಲೆ ಕುಳಿತ ನೀರಿನ ಹನಿಗೆ 
ಗೊತ್ತಿರಲಿಲ್ಲ ಸೂರ್ಯ ಬರೋತನಕ 
ಮಾತ್ರ ನನ್ನ ಸೊಗಸು ಅಂತಾ...
ಹನಿಯನ್ನು ಹೊತ್ತ ಎಲೆಗೂ ಗೊತ್ತಿರಲಿಲ್ಲ 
ನೀರು ಮುಗಿಯುವ ತನಕ ಮಾತ್ರ 
ನನ್ನ ಬದುಕು ಅಂತಾ...!
   
'ಈ ಜಗತ್ತಲ್ಲಿ ಯಾವುದು ಶಾಶ್ವತವಲ್ಲ ಎಲ್ಲವೂ ಕ್ಷಣಿಕ' - Made using Quotes Creator App, Post Maker App
3 likes 0 comments
@ManaEdtz
Quote by @ManaEdtz - ಜಿಟಿ ಜಿಟಿ ಸುರಿವ ಮಳೆಹನಿಯು
ನನ್ನೀ ಗಲ್ಲವ ಸೋಕಲು ಒಳಗೊಳಗೆ 
ನಲಿದಿಹೆನು ಈ ಚಂದ ಅನುಭವಕೆ 
ಆಕಾಶ ಸಲಿಲ ಪಾದವ ಸ್ಪರ್ಶಿಸಿ 
ಕಚಗುಳಿ ನೀಡಿರಲು ಒಳಗೊಳಗೆ 
ಏನೋ ಮುದ ಅನುಭವ........
ಕಹಿ ನೆನಪುಗಳು ಒಂದರೊಂದಂತೆ 
ಸರದಿ ಸಾಲಲ್ಲಿ ನಿಂತು ಮನಸ್ಸನ್ನು
ತಲ್ಲಣಿಸಿದಾಗ ಈ ವರ್ಷಧಾರೆಯು
ಅಂತರಾತ್ಮಕ್ಕೆ ಇಳಿದು ನೋವನ್ನೆಲ್ಲಾ 
ತೊಯ್ದು  ಎದೆಯ ಭಾರವನು ಇಳಿಸಿ 
ಮನವನು ಹುಚ್ಚೆದ್ದು ಕುಣಿಸಿದೆ.
ಕಣ್ಣಂಚಲಿ ಇದ್ದ ನೋವನ್ನು ಮರೆಸಿದಕ್ಕೆ 
ಓ ಮಳೆಯೆ ಕೃತಜ್ಞತೆ ನಿನಗೆ 
ನವಿರಾದ ಆತ್ಮಪ್ರೇಮ ಚಿಗುರಿರಲು
ಒಲವಿನ ನಮನಗಳು 

 - Made using Quotes Creator App, Post Maker App
3 likes 0 comments
@ManaEdtz
Quote by @ManaEdtz - ಎಲ್ಲೆ ಮೀರಿ ಹೋಗಿರುವ ಅತಿಯಾದ 
ಅವಲಂಬನೆಯ ಬದುಕನ್ನು ಕೊನೆಗಾಣಿಸಿ 
ಕೊನೆಯವರೆಗೂ ನಾವು ನಾವಾಗಿರಬೇಕು.
ಮರಣದ ಕಾಲದವರೆಗೂ ಪಯಣಿಸುವುದು 
ಒಂದು ರೀತಿಯಲ್ಲಿ ಏಕಾಂಗಿಯಾಗಿಯೇ..
ಹಾಗಾಗಿ,
"ನಾವಿದ್ದರಷ್ಟೆ ನಮಗೆ ಎಲ್ಲವೂ ಸೌಖ್ಯ" - Made using Quotes Creator App, Post Maker App
2 likes 0 comments
@ManaEdtz
Quote by @ManaEdtz - "ನಾಳೆಯ ಒಳಿತಿಗಾಗಿ ಇಂದಿನ
ಕೆಲ ಸಮಯವನ್ನು 
ಮೀಸಲಿಡುವುದು ತಪ್ಪಲ್ಲ ಆದರೆ,
ಬರೀ ನಾಳೆಯ ಚಿಂತೆಯಲ್ಲೇ
ಇಂದಿನ ಸಂತೋಷವನ್ನು 
ಕಳೆದುಕೊಳ್ಳಬಾರದು."

 - Made using Quotes Creator App, Post Maker App
5 likes 1 comments
@ManaEdtz
Quote by @ManaEdtz - 'ಕವನಗಳೆಂದರೆ,ಅಂತರಂಗವೆಂಬ 
ವೀಣೆಯಿಂದ  ವಿಚಾರಧಾರೆಯನ್ನು 
ಹೊರಹೊಮ್ಮಿಸುವ  ತಂತಿಗಳು.
ಭಾವವೆಲ್ಲವೂ ಜೀವತುಂಬಿ 
ಹೃನ್ಮನವನ್ನು ರಾಗದಲಿ 
ಬಂಧಿಸುವ ಸ್ವರಗಳು' - Made using Quotes Creator App, Post Maker App
4 likes 1 comments
@ManaEdtz
Quote by @ManaEdtz - "ಶ್ರೇಷ್ಠ ಸಂಕಲ್ಪ ಹೊಂದಿದವರಿಗೆ 
ಪ್ರಕೃತಿಯೇ ನೂರಾರು 
ಅದ್ವಿತೀಯ ಜೀವಾತ್ಮಗಳನ್ನು 
ಜೊತೆ ಮಾಡಿಕೊಡುತ್ತದೆ" - Made using Quotes Creator App, Post Maker App
2 likes 0 comments
@ManaEdtz
Quote by @ManaEdtz - 'Happyness is not something 
readymade.
It comes from your
own actions.'

 - Made using Quotes Creator App, Post Maker App
4 likes 1 comments
@ManaEdtz
Quote by @ManaEdtz - 'ಹೆಣ್ಣು ಮಾಯೆಯಲ್ಲ 
ಹೊನ್ನು ಮಾಯೆಯಲ್ಲ 
ಮಣ್ಣು ಮಾಯೆಯಲ್ಲ 
ಮನದ ಮುಂದಣ 
ಆಸೆಯೇ 'ಮಾಯೆ' - Made using Quotes Creator App, Post Maker App
6 likes 1 comments

Explore more quotes

@ManaEdtz
Quote by @ManaEdtz - "Love yourself
and others, for 
love is the
essence of life" - Made using Quotes Creator App, Post Maker App
2 likes 0 comments
@ManaEdtz
Quote by @ManaEdtz - "ಹೃದಯ ಘಾಸಿಗೊಳಿಸುವ 
ಕೆಲವೊಂದು ಮಾತುಗಳಿಗೆ 
ಹಿಡಿತ ಎಂಬ ಬೀಗ ಮುದ್ರೆ 
ಜಡಿಯಬೇಕು.. ಆಗ 
ಯಾವ ಸಂಬಂಧವು ತುಕ್ಕು 
ಹಿಡಿಯುವುದಿಲ್ಲ ಜೊತೆಗೆ,
ಯಾರನ್ನೂ ಕಳೆದುಕೊಳ್ಳುವ
 ಭಯವಿರುವುದಿಲ್ಲ" - Made using Quotes Creator App, Post Maker App
2 likes 1 comments
@ManaEdtz
Quote by @ManaEdtz - 'ಹೃದಯ ಸಂಭಂದಿಯ ಒಡಗೂಡಿ 
ಕುಳಿತುಕೊಂಡು ಮಾತನಾಡಲು ಸಾಕಷ್ಟಿದೆ 
ಪದಗಳಿಗೆ ಬರವೋ? ಮೌನದ ಮಾತಿಗೆ ಭಾರವೋ?
ಒಂಚೂರು ಆಡದೆ ಉಳಿದ ಶೇಷ ಭಾವವನ್ನು 
ವಿಶೇಷಗೊಳಿಸಲು, ಮನದೊಳಗೆ ಧೈರ್ಯವು 
ನರನಾಡಿಗಳಲ್ಲಿ ಸಂಚಾರಗೊಳ್ಳಲು ತುಸು 
ಕೈ ಚಾಚಿಹೆನು ನಿಮ್ಮಲ್ಲಿ................
ಪದಗಳ, ವಿಶ್ವಾಸದ, ಧ್ವನಿಯ,ಇತ್ಯಾದಿ..
ಇವೆಲ್ಲವನ್ನಾ ಎರವಲು ನೀಡಿ ಇದಾದರೆ,
ಕಾತೊರೆಯುವೆನು ಹೃದಯವಾಸಿಯಲ್ಲಿ 
ಮುಂದಿನ ಭೇಟಿ ಯಾವಾಗ? ಎಂದು ಕೇಳಲು
 ಇನ್ನೂ ಬಾಕಿ ಇದೆ ಅಂತರಾಳದಲ್ಲಿ ಅವಿತಿರುವ
ಭಾವ ತುಂಬಿದ ಮನದ ಮಾತುಗಳು'

 - Made using Quotes Creator App, Post Maker App
2 likes 0 comments